ಅವರಗೆರೆಯಲ್ಲಿ…..ಬೆಳದಿಂಗಳಲ್ಲಿ ಇಪ್ಟಾ

ದಾವಣಗೆರೆ : ಸಾಮಾಜಿಕ ಕಳಕಳಿ, ಸಮಾಜದಲ್ಲಿ ಇನ್ನೂ ಬೇರೂರಿರುವ ಅಸ್ಪೃಶ್ಯ ತೇ ಮೌಡ್ಯ ತೇ,ಪರಿಸರ ಸಂರಕ್ಷಣೆ, ಭ್ರಷ್ಟಾಚಾರ, ಮಹಿಳಾ ದೌರ್ಜನ್ಯ, ಸರ್ಕಾರಿ ಯಂತ್ರ ಗಳಲ್ಲಿ ನ ಲೋಪದೋಷಗಳನ್ನು ಎತ್ತಿ ಹಿಡಿದು ಸರ್ಕಾರಿ ಆಡಳಿತ ಎಚ್ಚರಿಕೆ ಮೂಡಿಸುವ ನಿಟ್ಟಿನಲ್ಲಿ

ನೈರ್ಮಲ್ಯ, ಸ್ವಚ್ಚತೆ, ಆರೋಗ್ಯ ಶೈಕ್ಷಣಿಕ ಅರಿವು ಗ್ರಾಮೀಣ ಪ್ರದೇಶದ ಜನರ ಪಂಚಾಯಿತಿ ಜನಾಧಿಕಾರ ಜನಾಂದೋಲನ

ಇನ್ನಿತರ ಹತ್ತು ಹಲವು ಪ್ರಗತಿಪರ ಜಾಗೃತಿ ಮೂಡಿಸುವ ಜಾಥಾ, ಬೀದಿನಾಟಕ ಪ್ರದರ್ಶನ ಮೂಲಕ ಸಾಮಾಜಿಕ ಬದುಕಿನ ಅನಾವರಣ ಇನ್ನಿತರೆ ಕಾರ್ಯಕ್ರಮ ಗಳ ಸಂಘಟಿಸಿ, ಜಿಲ್ಲೆಯ, ರಾಜ್ಯದ ಮನೆಮಾತಾಗಿರುವ ಇಪ್ಟಾ ಭಾರತೀಯ ಜನಕಲಾ ಸಮಿತಿ ಕಲಾವಿದರು ತಮ್ಮ ಜನಪ್ರಿಯ ಬೆಳದಿಂಗಳಲ್ಲಿ ಇಪ್ಟಾ ಕಾರ್ಯಕ್ರಮ ನನ್ನು ನಗರದ ಅವರಗೆರೆಯ ಗೌಡ್ರ ಶರಣಪ್ಪ ವೃತ್ತದಲ್ಲಿ ಜಾಗೃತಿ ಹಾಡುಗಳ ಪ್ರಸ್ತುತ ಪಡಿಸಿ ತಿಂಗಳ ಹುಣ್ಣಿಮೆಯ ಗೋದೋಳಿ ಸಂಜೆಗೇ ಮೆರುಗು ನೀಡಿದರು.

ಇಪ್ಟಾ ಜಿಲ್ಲಾ ಅಧ್ಯಕ್ಷ ಐರಣಿಚಂದ್ರು ರವರ ನೇತೃತ್ವದಲ್ಲಿ ನಡೆದ ಈ ಬೆಳದಿಂಗಳಲ್ಲಿ ಇಪ್ಟಾ ಕಾರ್ಯಕ್ರಮದಲ್ಲಿ ಸ್ಥಳೀಯ ಯುವ ಮುಖಂಡ ಅರುಣ್ ಕುಮಾರ್, ರುದ್ರಮುನಿ, ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿ ಇಪ್ಟಾ ಕಲಾತಂಡ ಕಲಾವಿದರ ಹಾಡುಗಳ ಮೆಲುಕು ಹಾಕಿದರು.

ಆರಂಭದಲ್ಲಿ ಇಪ್ಟಾ ಸ್ವಾಗತ ಗೀತೆ ಹಾಡಿ ಮನುಷ್ಯ ರಾದ ನಾವುಗಳು ಮಾನವೀಯ ಮೌಲ್ಯಗಳ ಗುಣ ಅಳವಡಿಸಿಕೊಂಡು ಮಾನವರಾಗೋಣ….ಈ ನಾಡನ್ನು ಕಟ್ಟಲು ಶ್ರಮಿಸೋಣ ಎಂಬ ಸಂದೇಶ ಸಾರುವ, ರೈತರ ಬವಣೆ ನೀಗಿಸುವ ರೈತ ಪರ ಹಾಡುಗಳ ಹಾಡಿದರು.

ಕಾರ್ಯಕ್ರಮದಲ್ಲಿ ಶರಣಪ್ಪ ಶ್ಶಾಗಲೆ,ಕುಟ್ಟುವಾಗ ಮಹಾಂತೇಶ್, ಶ್ರೀ ನಿವಾಸ, ಶೌಕತ್ ಗೌರವ ಸಲಹೆಗಾರ ಪುರಂದರ್ ಲೋಕಿ ಕೆರೆ, ಅಲಿ,ಖಾಧರ್,ಹೂವಫ್ಫ, ಷಣ್ಮುಖ ಸ್ವಾಮಿ, ಪಾಲ್ಗೊಂಡಿದ್ದರು.

ಆರಂಭದಲ್ಲಿ ಇಪ್ಟಾ ಕಾರ್ಯದರ್ಶಿ ಬಾನಪ್ಪ ಸ್ವಾಗತಿಸಿ, ಕೊನೆಯಲ್ಲಿ ಕಲಾವಿದ ಖಾದರ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!