ಫೆ 11 ರಂದುಅಮೃತಕಾಲ ಬಜೆಟ್ ಅವಲೋಕನಾ ಸಭೆ

ಅಮೃತಕಾಲ ಬಜೆಟ್ ಅವಲೋಕನಾ ಸಭೆ
ದಾವಣಗೆರೆ : ಕೇಂದ್ರದ ಅಮೃತಕಾಲ ಬಜೆಟ್-ಅವಲೋಕನಾ ಸಭೆಯನ್ನು ಚನ್ನಗಿರಿ ಕೇಶಮೂರ್ತಿ ರೋಟರಿ ಸಾಭವನದಲ್ಲಿ ಇದೇ 11ರ ಶನಿವಾರ ಸಂಜೆ 5.45ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಎಸ್.ಎಂ. ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಎಸ್.ಎ. ರವೀಂದ್ರನಾಥ್, ರಾಜ್ಯ ಪ್ರಕೋಷ್ಠಗಳ ಸಹ ಸಂಯೋಜಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ ಸಭೆ ಉದ್ಘಾಟಿಸಲಿದ್ದಾರೆ.
ಆರ್ಥಿಕ ತಜ್ಞ, ಆರ್ಥಿಕ ಪ್ರಕೋಷ್ಠ ರಾಜ್ಯ ಸಂಚಾಲಕ ಸಮೀರ್ ಕಾಗಲಕರ್ ಮುಖ್ಯ ವಕ್ತಾರರಾಗಿ ಆಗಮಿಸಲಿದ್ದಾರೆ. ಲೆಕ್ಕ ಪರಿಶೋಧಕ ಉಮೇಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ಹೇಳಿದರು.
ಬಜೆಟ್ ಕರ್ನಾಟಕಕ್ಕೆ ದೊಡ್ಡ ಕೊಡುಗೆ:
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಅವರು ಮಂಡಿಸಿರುವ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಂಹಪಾಲು ದೊರೆತಂತಾಗಿದೆಎಂದು ಹನಗವಾಡಿ ವೀರೇಶ್ ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಗೆ 5.300 ಕೋಟಿ ರೂ. ಅನುದಾನ ಬಂದಿರುವುರು ವಿಪಕ್ಷಗಳಿಗೆ ನೀರಾಸೆ ಉಂಟು ಮಾಡಿ, ಯೋಜನೆ ಬಗ್ಗೆ ಅಪ ಪ್ರಚಾರ ಮಾಡುತ್ತಿವೆ ಎಂದು ಹೇಳಿದರು.
ಚುನಾವಣೆ ಇದ್ದರೂ ಇದು ಚುನಾವಣಾ ಬಜೆಟ್ ಅಲ್ಲ. ಇದು ಅಮೃತ ಕಾಲದ ಬಜೆಟ್ ಆಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಡಿ.ಎಸ್ ಶಿವಶಂಕರ್, ಶಿವರಾಜ್ ಪಾಟೀಲ್, ಜಿ.ಮಂಜಾನಾಯ್ಕ ಉಪಸ್ಥಿತರಿದ್ದರು.