ಲೋಕಲ್ ಸುದ್ದಿ

ಓಟು ಹಾಕಿ ಅರ್ಧ ಗಂಟೆಯಲ್ಲೇ ಮೃತಪಟ್ಟ ವೃದ್ಧೆ

ಓಟು ಹಾಕಿ ಅರ್ಧ ಗಂಟೆಯಲ್ಲೇ ಮೃತಪಟ್ಟ ವೃದ್ಧೆ

ರಾಯಚೂರು: ವಿಧಾನಸಭಾ ಚುನಾವಣೆಗೆ ಮನೆಯಿಂದ ಮತದಾನ ಮಾಡಿದ ಅರ್ಧ ಗಂಟೆಯಲ್ಲಿಯೇ ವೃದ್ಧೆಯೊಬ್ಬರು ಅಸುನೀಗಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ಈ ಘಟನೆ ನಡೆದಿದ್ದು, ಮೃತ ವೃದ್ಧೆ ಅಲಬನೂರು ಗ್ರಾಮದ 82 ವರ್ಷದ ಮಂಗಮ್ಮ ಎಂದು ತಿಳಿದುಬಂದಿದೆ. ಮಂಗಮ್ಮ ಅವರು ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು.

ಈ ಬಾರಿ ಚುನಾವಣಾ ಆಯೋಗ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿಕೊಟ್ಟಿತ್ತು. ಅದರಂತೆ ನಿನ್ನೆ ಮಂಗಮ್ಮ ಅವರ ಮನೆಗೆ ಚುನಾವಣಾ ಸಿಬ್ಬಂದಿ ತೆರಳಿದ್ದರು. ಮಂಗಮ್ಮ ಅವರ ಮನೆಗೆ ಪಿಆರ್​ಒ ದಿನೇಶ ಕೆಪಿ ಹಾಗೂ ಎಪಿಆರ್​​ಒ ಬಸಪ್ಪ ಹೆಚ್ ಹಾಗೂ ಇತರ ಸಿಬ್ಬಂದಿ ತೆರಳಿದ್ದರು.

349 ಸಂಖ್ಯೆಯ ಮತಪತ್ರವನ್ನು ಮಂಗಮ್ಮ ಅವರಿಗೆ ನೀಡಲಾಗಿತ್ತು. ಮಧ್ಯಾಹ್ನ ಸುಮಾರು 12.19ರ ವೇಳೆಗೆ ಮಂಗಮ್ಮ ಮತದಾನ ಮಾಡಿದ್ದು ನಂತರ ಮಧ್ಯಾಹ್ನ 12.50ಕ್ಕೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Click to comment

Leave a Reply

Your email address will not be published. Required fields are marked *

Most Popular

To Top