ಆಂಜನೇಯನ ಭಕ್ತರು ನೈಜ ಭಕ್ತರಾಗದಿದ್ದಲ್ಲಿ ದೇವಾಲಯ ಕಟ್ಟುವುದು ನಿರಾರ್ಥಕ – ಭೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಜಗಳೂರು: ಆಂಜನೇಯನ ಭಕ್ತರು ನೈಜ ಭಕ್ತರಾಗದಿದ್ದಲ್ಲಿ ದೇವಾಲಯ ಕಟ್ಟುವುದು ನಿರಾರ್ಥಕ. ಭಕ್ತಿಪಥದಲ್ಲಿ ಭಕ್ತ ಭಗವಂತನಾದ ಆದರ್ಶ ರೂಪ ತ್ರೇತಾಯುಗದ ಆಂಜನೇಯ. ಜಾತಿ-ಮತ-ಪಂಥಗಳನ್ನು ಮೀರಿ ಜನ ಆಂಜನೇಯನನ್ನು ಆರಾಧಿಸುತ್ತಾರೆ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಜಗಳೂರು ತಾಲ್ಲೂಕಿನ ಬಿಳಿಚೊಡು ಹೋಬಳಿಯ ಬೆಂಚೆಕಟ್ಟೆ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಾಲಯ ಲೋಕಾರ್ಪಣೆ ಹಾಗೂ ಕಳಸಾರೋಹಣ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನೂರು ದೇವಾಲಯ ಕಟ್ಟಿ ಪ್ರವೇಶಸುವುದಕ್ಕಿಂತ, ದೇವಾಲಯ ಪ್ರವೇಶಿಸುವ ನೂರಾರು ದೇಹಗಳು ದೇವಾಲಯವಾಗಿ ಪರಿವರ್ತನೆಗೊಳ್ಳಬೇಕು ಎಂದು ತಿಳಿಸಿದರು.
ರಾಮನ ಗುಡಿಯಿಲ್ಲದ ಊರಿರಬಹುದು ಆಂಜನೇಯನ ಗುಡಿಯಿಲ್ಲದ ಊರೇ ಇಲ್ಲ. ಆಂಜನೇಯ ಭಕ್ತನೆಂದರೆ ಭಕ್ತ, ವೀರವಿರಕ್ತ, ಪರಮಜ್ಞಾನಿ, ಅಮ್ಮನ ಅಕ್ಕರೆಯ ಕಂದ, ಜೀವನದ ಎಲ್ಲ ಮಹಾ ಮೌಲ್ಯಗಳ ಗಣಿ, ಎಂಥ ಕೆಲಸವನ್ನೂ ಮಾಡಬಲ್ಲ ಪರಾಕ್ರಮಿ. ಲೋಕದ ಶೋಕವನ್ನು ನಾಶಮಾಡಿದವನು ಎಂದು ಕೊಂಡಾಡಿದರು.
ಇಂದಿಗೂ ಚಿರಂಜೀವಿಯೆAದೇ ಪ್ರಸಿದ್ಧನಾಗಿರುವ ಆಂಜನೇಯ. ಲೋಕದಲ್ಲಿ ಶುದ್ಧವಾದ ಜೀವನ ಎಂದರೆ ಹೀಗಿರಬೇಕು ಎನ್ನುವುದಕ್ಕೆ ಅವನು ನಿದರ್ಶನ. ಇಂಥ ಗುಣಗಳಿರುವುದರಿಂದಲೇ ನಮ್ಮ ಸಮಾಜ ಅವನನ್ನು ಪೂಜಿಸಿ ಕೊಂಡಾಡುತ್ತಿದೆ. ಎಲ್ಲ ದೇವರುಗಳಿಗಿಂತ ಆಂಜನೇಯ ಮೇಲಿನ ಸ್ಥಾನದಲ್ಲಿದ್ದಾನೆ ಎಂದು ಅಭಿಪ್ರಾಯಿಸಿದರು.
ದೇವಾಲಯ ಪ್ರವೇಶಿಸುವ ದೇಹಗಳು ದುರ್ಗುಣ, ದುಶ್ಛಟ, ದುರ್ಬುದ್ದಿ ತ್ಯಜಿಸಿ ಸದ್ಗುಣ, ಸದ್ಬುದ್ಧಿ, ಸದಾಚಾರ ಮೈಗೂಡಿಸಿಕೊಳ್ಳಲಿ. ತನು,ಮನ, ಭಾವ ಶುದ್ಧೀಕರಣವೇ ಅಂತರAಗ ಬಹಿರಂಗ ಶುದ್ಧೀಕರಣ. ಮಾನವ ಮಹಾದೇವನಾಗಬೇಕೆಂದು ಹೇಳಿದರು.
ಚಿತ್ರದುರ್ಗ ಭೋವಿ ಗುರುಪೀಠದ ವಿದ್ಯಾಸಂಸ್ಥೆಯ ನಿರ್ದೇಶಕರಾದ ಡಿ.ಸಿ ಮೋಹನ, ಸೂರಗೊಂಡನಹಳ್ಳಿ ಕೃಷಮೂರ್ತಿ, ಹಾವೇರಿ ಜಿಲ್ಲಾ ಭೋವಿಸಂಘದ ಅಧ್ಯಕ್ಷ ರವಿ ಪೂಜಾರಿ, ಡಾ.ನಾಗೇಶ್, ತಾಲ್ಲೂಕು ಅಧ್ಯಕ್ಷರಾದ ಪಿ.ದೇವರಾಜ್ ಮಾತನಾಡಿದರು.
ದಾನಿಗಳಾದ ಕುರುಬಲಹಟ್ಟಿ ತಿಪ್ಪೇಶ, ಬಿ.ಜಿ.ರಾಜಪ್ಪ, ಉಪನ್ಯಾಸಕ ದ್ಯಾಮಪ್ಪ, ಉಪನ್ಯಾಸಕ ಕೆಹೆಚ್ ವೆಂಕಟೇಶ್, ಗ್ರಾ.ಪಂ.ಮಾಜಿ ಸದಸ್ಯ ದ್ಯಾಮಪ್ಪ, ವಿರೂಪಾಕ್ಷಪ್ಪ ಆರ್, ಪಿ.ಬಸವರಾಜ್ ಆರೋಗ್ಯ ಇಲಾಖೆ
ಇವರುಗಳಿಗೆ ಸನ್ಮಾನ ನೇರವೇರಿಸಿದರು.
ಸಮಾರಂಭದಲ್ಲಿ ಎಲ್. ಜಗನ್ನಾಥ, ಪಿ.ಟಿ ಗೋವಿಂದಪ್ಪ, ಸತ್ಯಮ್ಮ ತಿಮ್ಮಪ್ಪ, ಭಜನೆ ಹಿರಿಯರಾದ ಕುಮಾರಸ್ವಾಮಿ, ನವಲಪ್ಪ, ಬಿ.ಎಸ್. ರಾಜಪ್ಪ, ವಿರೂಪಾಕ್ಷಪ್ಪ, ನಾಗೇಶಪ್ಪ, ಹೆಬ್ಬಾಳ ನಾಗರಾಜಪ್ಪ, ಪೂಜಾರಿ ದ್ಯಾಮೇಶ್, ರಂಗಪ್ರವೇಶ ಯಲ್ಲಪ್ಪ, ಟಿ.ವೀರಭದ್ರಪ್ಪ, ಆರ್.ಅಂಜಿನಪ್ಪ, ಬಿ.ಇ.ಅಂಜಿನಪ್ಪ ಹಾಗೂ ನೂತನ ಗ್ರಾಮ ಸದಸ್ಯರುಗಳು ಉಪಸ್ಥಿತಿಯಿದ್ದರು.