ಜ. 3 ರಿಂದಬ7 ರವರೆಗೆ ಹಿರೆಮುಗದೂರಿನ ಸಾಲಿದುರಗಮ್ಮ ಹಾಗೂ ಮಾತಂಗೆಮ್ಮ ದೇವತೆಗಳ ಜಾತ್ರೆ
ಸವಣೂರು: ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದ ಶ್ರೀ ಸಾಲಿದುರಗಮ್ಮ ಹಾಗೂ ಮಾತಂಗೆಮ್ಮ ದೇವತೆಗಳ ಜಾತ್ರಾ ಮಹೋತ್ಸವ ದಿನಾಂಕ 03 ರಿಂದ 07 ರ ವರಿಗೆ ಜರುಗಲಿದ್ದು,ಎಲ್ಲಾ ರೀತಿಯ ತಯಾರಿಗಳು ಜರುಗುತ್ತಿವೆ. ಸರ್ವರ ಸಹಕಾರದಿಂದ ದೇವಸ್ಥಾನದ ಬಣ್ಣ, ಪ್ಯಾಂಡಲ್ ಮುಖ್ಯ ದ್ವಾರ ಭಾಗಿಲು ತಯಾರಿಸಲಾಗಿದ್ದು, ಎಲ್ಲರೂ ಕ್ರಿಯಾಶೀಲವಾಗಿ ಜಾತ್ರಾ ಮಹೋತ್ಸವದ ತಯಾರಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಭಕ್ತಾದಿಗಳು ದೇವತೆಗಳ ಜಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವತೆಗಳ ಆರ್ಶಿವಾದ ಪಡೆಯುವಂತಾಗಲಿ ಎಂದು ಯುವ ಮುಖಂಡರಾದ ಗುಡ್ಡಪ್ಪ ನಡುವಿನಮನಿ,ನಿಂಗಪ್ಪ ಹೊಸಮನಿ.ಗದಿಗೆಪ್ಪ ನಡುವಿನಮನಿ ಹೇಳಿದರು.