ತಲೆ ಸರಿ ಇರೋರು ಯಾರು ಬೇಕಾದರೂ ಸಿಎಂ, ಪಿಎಂ ಆಗಬಹುದು – ಬಿಸಿ ಪಾಟೀಲ್

ಬಿಸಿ ಪಾಟೀಲ್
ದಾವಣಗೆರೆ : 25 ವರ್ಷವಾದರೂ, ತಲೆ ಸರಿ ಇರೋರು ಯಾರು ಬೇಕಾದರೂ ಸಿಎಂ ಆಗಬಹುದು ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದರು. ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ರೈತ ರಮೇಶ್ ಅವರು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿರು ಉದ್ಯಮ ಯೋಜನೆಯಡಿ ಆರಂಭಿಸಿರುವ ಸ್ವದೇಶಿ ಅಡಿಕೆ ಮಿಲ್‌ಗೆ ಚಾಲನೆ ನೀಡಿ, ಪ್ರಹ್ಲಾದ್ ಜೋಶಿ ಬಿಜೆಪಿಯಲ್ಲಿ ಮುಂದಿನ ಸಿಎಂ ಆಗುತ್ತಾರೆ ಎಂಬ ಹೇಳಿಕೆಗೆ ಬುಧವಾರ ಈ ರೀತಿ ಉತ್ತರ ನೀಡಿದರು. ಭಾರತ ದೇಶದಲ್ಲಿ 25 ವರ್ಷವಾದರೂ, ಪ್ರಜಾಪ್ರಭುತ್ವದಲ್ಲಿ ಯಾರೂ ಬೇಕಾದರೂ ಪ್ರಧಾನ ಮಂತ್ರಿಘಿ, ಸಿಎಂ ಆಗಬಹುದು. ಕುಮಾರಸ್ವಾಮಿಗೂ ನಮಗೂ ಏನು ಸಂಬಂಧವಿದೆ. ನಾವು ಬಿಜೆಪಿ, ಅವರು ಕಾಂಗ್ರೆಸ್, ನಮ್ಮ ಪಕ್ಷದ ಆಂತರಿಕ ವಿಷಯ ಕುಮಾರಸ್ವಾಮಿಗೆ ಯಾಕೆ ಬೇಕು. ನಾವು ಏನು ಬೇಕು ಅದನ್ನು ಮಾಡುತ್ತೇವೆ..ನಮ್ಮ ಪಕ್ಷದ ಆಂತರಿಕ ವಿಷಯ ಯಾಕೆ ಬೇಕು…ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಶಾಸಕಾಂಗದೊಂದಿಗೆ ಚರ್ಚೆ ಮಾಡಿ, ಯಾರನ್ನು ಮುಖ್ಯುಮಂತ್ರಿ ಮಾಡಬೇಕೆಂದು ತೀರ್ಮಾನ ಮಾಡುತ್ತೇವೆ. ಕುಮಾರಸ್ವಾಮಿ ಲಿಂಗಾಯಿತ, ಒಕ್ಕಲಿಗರಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ದುರುದ್ದೇಶವಿದೆ. ಮುಂದಿನ ಚುನಾವಣೆಯಲ್ಲಿ 150 ಸೀಟು ಗೆದ್ದು ಮತ್ತೆ ಆಡಳಿತಕ್ಕೆ ಬರುತ್ತೇವೆ ಎಂದು ಬಿ.ಸಿ.ಪಾಟೀಲ್ ಹೇಳಿದರು.