ಸುದೀಪ್ ಅವರ ಚಿತ್ರ, ಜಾಹೀರಾತು, ಟಿವಿ ಶೋಗಳ ತಡೆ ಹಿಡಿಯಲು ಚುನಾವಣಾ ಆಯೋಗಕ್ಕೆ ಮನವಿ

ಚಿತ್ರದುರ್ಗ: ನೀತಿ ಸಂಹಿತೆ ಅನುಸಾರ ಚುನಾವಣೆ ಮುಗಿಯುವವರೆಗೆ ಚಿತ್ರ ನಟ ಕಿಚ್ಚ ಸುದೀಪ್ ಅವರ ಚಲನಚಿತ್ರಗಳು, ಟಿವಿ ಶೋಗಳು ಹಾಗೂ ಜಾಹೀರಾತುಗಳನ್ನು ತಡೆ ಹಿಡಿಯುವಂತೆ ಚಿತ್ರದುರ್ಗ ಜಿಲ್ಲಾ ಯಾುವ ಕಾಂಗ್ರೆಸ್ ಸಮಿತಿ ಕಾನೂನು ಘಟಕ ಚುನವಣಾ ಆಯುಕ್ತರಿಗೆ ಒತ್ತಾಯಿಸಿದೆ.
ಗುರುವಾರ ಈ ಕುರಿತು ಯುವ ಕಾಂಗ್ರೆಸ್ ಕಾನೂನು ಘಟಕ್ಷ ಶಶಾಂಕ್ ಎನ್., ಸುದೀಪ್ ಒಂದು ಪಕ್ಷದ ಪರವಾಗಿ ಪ್ರಚಾರ ಮಾಡುವುದಾಗಿ ಅವರೇ ಘೋಷಣೆ ಮಾಡಿದ್ದಾರೆ.
ಆದ್ದರಿಂದ ಅವರ ನಟನೆಯ ಚಲನಚಿತ್ರಗಳು, ಟಿವಿ ಶೋಗಳು, ಜಾಹೀರಾತುಗಳು ಮತದಾರರ ಮೇಲೆ ಪ್ರಭಾವ ಬೀರುವುದರಿಂದ ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಶೀಘ್ರವೇ ಅವುಗಳನ್ನು ತಡೆ ಹಿಡಿಯಲು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.