ವಿದ್ಯಾರ್ಥಿ ವೇತನ ಸೌಲಭ್ಯಕ್ಕಾಗಿ ಮೀನುಗಾರರ – ಮೀನುಕೃಷಿಕರ ಮಕ್ಕಳಿಂದ ಅರ್ಜಿ ಆಹ್ವಾನ

ದಾವಣಗೆರೆ: ಮುಖ್ಯಮಂತ್ರಿ ಮೀನುಗಾರ ವಿದ್ಯಾನಿಧಿ ಯೋಜನೆಯಡಿ ಪ್ರಸಕ್ತ 2022-23ನೇ ಸಾಲಿಗೆ ವಿದ್ಯಾರ್ಥಿ ವೇತನ ಸೌಲಭ್ಯಕ್ಕೆ 8 ರಿಂದ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯರು ಹಾಗೂ ಪಿಯುಸಿ ಮತ್ತು ನಂತರದ ಕೋರ್ಸ್‍ಗಳಲ್ಲಿ ವ್ಯಾಸಂಗಮಾಡುತ್ತಿರುವ ಮೀನುಗಾರರ ಹಾಗೂ ಮೀನುಕೃಷಿಕರ ಮಕ್ಕಳಿಂದ ಆಹ್ವಾನಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳು ಸ್ಟೇಟ್ ಸ್ಕಾಲರ್‍ಶಿಪ್ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಂಡು ಅರ್ಜಿ ಸಲ್ಲಿಸಬೇಕು. ವೃತ್ತಿಪರ ಮೀನುಗಾರರು, ಮೀನು ಕೃಷಿಕರು ಯೋಜನೆಯ ಸದುಪಯೋಗಪಡೆದುಕೊಳ್ಳಲು ಮೀನುಗಾರಿಕೆ ಉಪನಿರ್ದೇಶಕ ಆರ್.ಗಣೇಶ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಇಲಾಖೆ ಕಚೇರಿ ಸಂಪರ್ಕಿಸಲು ಕೋರಲಾಗಿದೆ.

ಮುಖ್ಯಮಂತ್ರಿ ಮೀನುಗಾರರ ವಿದ್ಯಾನಿಧಿ: ಅರ್ಜಿ ಆಹ್ವಾನ
2022-23ನೇ ಸಾಲಿನಲ್ಲಿ ಮುಖ್ಯಮಂತ್ರಿ ಮೀನುಗಾರರ ವಿದ್ಯಾನಿಧಿ ಯೋಜನೆಯನ್ನು ಮೀನುಗಾರರ, ಮೀನು ಕೃಷಿಕರ ಮಕ್ಕಳಿಗೂ ವಿಸ್ತರಿಸಲಾಗಿದ್ದು, ಮೀನುಗಾರಿಕೆ ಇಲಾಖೆ ವತಿಯಿಂದ ಮೀನುಗಾರರ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 8 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ “On Entitlement Basis” ಮುಖಾಂತರ ವಿದ್ಯಾರ್ಥಿವೇತನವನ್ನು ಪಾವತಿ ಮಾಡಲಾಗುವುದು. ಪಿಯುಸಿ ಮತ್ತು ತದನಂತರ ಕೋರ್ಸ್‍ಗಳಲ್ಲಿ ಓದುತ್ತಿರುವ ಅರ್ಹ ಯೋಜನೆಯಡಿ ವಿದ್ಯಾರ್ಥಿ ವೇತನ ಪಡೆಯಲು “state scholarship portel”ನಲ್ಲಿ ನೊಂದಾಯಿಸಿ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳು ಜಿಲ್ಲೆಯ ಎಲ್ಲಾ

Leave a Reply

Your email address will not be published. Required fields are marked *

error: Content is protected !!