ರಾಜ್ಯ ಹೈಕೋರ್ಟ್‌ಗೆ ವಕೀಲರ ವಿಭಾಗದಿಂದ ಇಬ್ಬರು ನ್ಯಾಯಮೂರ್ತಿಗಳ ನೇಮಕ

ರಾಜ್ಯ ಹೈಕೋರ್ಟ್
ಬೆಂಗಳೂರು: ಹೈಕೋರ್ಟ್ ವಕೀಲರ ವಿಭಾಗದಿಂದ ಇಬ್ಬರು ನ್ಯಾಯಮೂರ್ತಿಗಳನ್ನು ರಾಜ್ಯ ಹೈಕೋರ್ಟ್‌ಗೆ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಪರ ವಕೀಲರಾಗಿದ್ದ ವಿಜಯಕುಮಾರ್ ಎ.ಪಾಟೀಲ್ ಹಾಗೂ ಹೈಕೋರ್ಟ್ ವಕೀಲ ರಾಜೇಶ್ ರೈ ಕಲ್ಲಂಗಳ ಅವರು ರಾಜ್ಯ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದಾರೆ. ಇವರಿಬ್ಬರೂ 2 ವರ್ಷಗಳ ಕಾಲ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಕೆಲಸ ನಿರ್ವಹಿಸಲಿದ್ದು ನಂತರ ಅವರ ಸೇವೆ ಕಾಯಂಗೊಳ್ಳಲಿದೆ.
ವಿಜಯಕುಮಾರ್ ಎ.ಪಾಟೀಲ್ ಹಾಗೂ ರಾಜೇಶ್ ರೈ ಕಲ್ಲಂಗಳ ಅವರ ನೇಮಕದಿಂದ ಈಗ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ 53ಕ್ಕೆ ಏರಿದಂತಾಗಿದೆ. ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳ ಮಂಜೂರಾತಿ ಸಂಖ್ಯೆ 62.
ಇತ್ತೀಚೆಗಷ್ಟೇ ರಾಮಚಂದ್ರ ಡಿ.ಹುದ್ದಾರ ಹಾಗೂ ವೆಂಕಟೇಶ್ ಟಿ.ನಾಯಕ್ ಅವರನ್ನು ಜಿಲ್ಲಾ ಪ್ರಧಾನ ನ್ಯಾಯಾಧೀಶರ ವಿಭಾಗದಿಂದ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲಾಗಿತ್ತು.