ನರೇಗಾ ಯೋಜನೆಯಡಿ ಕೆಲಸ ಪ್ರಾರಂಭಿಸಿದ ಅರೇಹಳ್ಳಿ ಗ್ರಾಮಸ್ಥರು
ದಾವಣಗೆರೆ : ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅರೇಹಳ್ಳಿ ಗ್ರಾಮಸ್ಥರು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಇಂದಿನಿಂದ ಸಾಮೂಹಿಕ ಸ್ಮಶಾನ ಅಭಿವೃದ್ದಿ ಕಾಮಗಾರಿ ಕೈಗೊಂಡರು. ಅರೇಹಳ್ಳಿ ಗ್ರಾಮದ ಸ್ಮಶಾನದಲ್ಲಿ ಬೆಳೆದಿದ್ದ ಜಂಗಲ್‌ಗಳನ್ನು ಕಟ್ ಮಾಡಿ ಸ್ವಚ್ಚಗೊಳಿಸಿದರು. ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಮೊದಲ ದಿನವಾದ ಇಂದು ಒಟ್ಟು 22 ಜನ ಕಾಮಗಾರಿ ಪ್ರಾರಂಭಿಸಿದ್ದು, ಇದರಲ್ಲಿ 10 ಜನ ಗಂಡು ಮಕ್ಕಳು, 22 ಜನ ಹೆಣ್ಣು ಮಕ್ಕಳಿದ್ದರು. ಈ ವೇಳೆ ಚನ್ನಗಿರಿ ತಾಲೂಕು ಕೋ-ಆರ್ಡಿನೇಟರ್ ಪ್ರೇಮ್‌ಚಂದ್, ಬಿಎಫ್‌ಟಿ ಮಹೇಶ್‌ಕುಮಾರ್, ಕಾರಿಗನೂರು ಗ್ರಾಮ ಪಂಚಾಯ್ತಿ ಕಾಯಕಮಿತ್ರ ಕಾವೇರಿ ಹಾಗೂ ಕಾರಿಗನೂರು ಗ್ರಾಮ ಪಂಚಾಯ್ತಿ ಸದಸ್ಯ ಚೇತನ್‌ಕುಮಾರ್ ಇದ್ದರು.