ದುಗ್ಗಮ್ಮ ದೇವಸ್ಥಾನ ಸುತ್ತಮುತ್ತ ಮಹಾಪೌರರಾದ ಜಯಮ್ಮ ಗೋಪಿನಾಯ್ಕ್ ಅವರಿಂದ ಸ್ವಚ್ಚ ಕಾರ್ಯ
ದಾವಣಗೆರೆ : ದುಗ್ಗಮ್ಮ ದೇವಿ ಜಾತ್ರೆ ನಂತರ ನಗರ ಪ್ರದೇಶ ತ್ಯಾಜ್ಯ ವಸ್ತುಗಳಿಂದ ಕೊಳಚೆ ಪ್ರದೇಶವಾಗಿ ನಿರ್ಮಾಣವಾಗಿದೆ. ಇದನ್ನು ಗಮನಿಸಿದ ಪೂಜ್ಯ ಮಹಾಪೌರರು ನಗರದ ಸ್ವಚ್ಚತೆಗೆ ಕ್ರಮಕೈಗೊಂಡಿದ್ದು ಇಂದು ಖುದ್ದಾಗಿ ಅವರೇ ನಗರ ಪ್ರದೇಶಗಳಲ್ಲಿ ಕೂಡಿರುವ ಅಶುಚಿತ್ವವನ್ನು ಗಮನಿಸಿ ಸ್ವಚ್ಚಗೊಳಿಸಿದರು. ದಾವಣಗೆರೆ ನಗರದ ದುಗ್ಗಮ್ಮ ದೇವಿ ದೇವಸ್ಥಾನದ ಅಕ್ಕಪಕ್ಕದಲ್ಲಿರುವ ಪ್ರದೇಶಗಳಿಗೆ ಭೇಟಿ ನೀಡಿ ಸ್ವಚ್ಚಗೊಳಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಗೋಣ್ಯೆಪ್ಪ, ವೇಣುಕುಮಾರ್, ಆರೋಗ್ಯ ನಿರೀಕ್ಷಕರುಮ ಪೌರ ಕಾರ್ಮಿಕರು ಇತರರು ಉಪಸ್ಥಿತರಿದ್ದರು.