3 ಲಕ್ಷಕ್ಕೆ ನಾಲ್ಕು ದಿನದ ಮಗು ಮಾರಿದ ತಾಯಿಯ ಬಂಧನ

3 ಲಕ್ಷಕ್ಕೆ ನಾಲ್ಕು ದಿನದ ಮಗು ಮಾರಿದ ತಾಯಿಯ ಬಂಧನ

ತಿರುವನಂತಪುರಂ: ಮೂರು ಲಕ್ಷ ರೂಪಾಯಿಗೆ ತನ್ನ ನವಜಾತ ಶಿಶುವನ್ನು ಮಾರಾಟ ಮಾಡಿದ ಆರೋಪದ ಮೇಲೆ ಕೇರಳ ತಂಪನೂರು ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.

ಆರೋಪಿ ಮಹಿಳೆ ಕಂಜಿರಂಕುಲಂ ನಿವಾಸಿಯೆಂದು ತಿಳಿದುಬಂದಿದೆ. ಈ ಘಟನೆ ಬಗ್ಗೆ ಏಪ್ರಿಲ್‌ 21ರಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ತಂಪನೂರು ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ವಿಚಾರವಾಗಿ ಪೊಲೀಸರು ತನಿಖೆ ಪ್ರಾರಂಭಿಸಿದ್ದರು.

ಮಗು ಏಪ್ರಿಲ್‌ ಮೊದಲ ವಾರದಲ್ಲಿ ಜನಿಸಿದ್ದು, ಹುಟ್ಟಿದ ನಾಲ್ಕು ದಿನಕ್ಕೆ ಮಾರಾಟ ಮಾಡಲಾಗಿದೆ. ಮೂರು ಲಕ್ಷ ರೂಪಾಯಿಗೆ ಮಗು ಮಾರಾಟವಾಗಿದ್ದು, ತಿರುವನಂತಪುರಂದ ದಂಪತಿ ಹಣಕೊಟ್ಟು ಮಗುವನ್ನು ಮಹಿಳೆಯಿಂದ ಪಡೆದಿದ್ದರು. ಈ ಬಗ್ಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ಬಂದಿದ್ದು, ಅವರು ನಮಗೆ ಮಾಹಿತಿ ನೀಡಿದ್ದಾರೆ‘ ಎಂದು ಪೊಲೀಸರು ಹೇಳಿದರು.
ಮಗುವಿನ ಸುರಕ್ಷತೆ ಮತ್ತು ಜವಾಬ್ದಾರಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!