ಗಂಡನನ್ನೇ ಸುಪಾರಿಕೊಟ್ಟು ಕೊಲೈಗೆದ ಹೆಂಡತಿ ಹಾಗೂ ಪ್ರಿಯಕರನ ಬಂಧನ

ಗಂಡನನ್ನೇ ಸುಪಾರಿಕೊಟ್ಟು ಕೊಲೈಗೆದ ಹೆಂಡತಿ

ಕುಣಿಗಲ್: ಆನೈತಿಕ ಸಂಬಂಧ ಹೊಂದಿ, ಪತಿಯನ್ನೇ ಸುಪಾರಿಕೊಟ್ಟು ಕೊಲೈಗೈದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಎಂಟು ಜನರನ್ನು ಕುಣಿಗಲ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮೃತ ಮಂಜುನಾಥನ ಪತ್ನಿ ಹರ್ಷಿತಾ (21), ಆಕೆಯ ದೊಡ್ಡಮ್ಮನ ಮಗ ಬೆಂಗಳೂರಿನ ಸುಂಕದಕಟ್ಟೆಯ ರಘು (29), ಆತನ ಸಹೋದರ ರವಿಕಿರಣ್ ಹಾಗೂ ಸ್ನೇಹಿತರಾದ ಕಿತ್ತನಾಮಂಗಲದ ಅರುಣ, ಕೇಶವ, ನಟರಾಜ, ಸಂತೆಮಾವತ್ತೂರಿನ ಶ್ರೀಧರ್, ಮಾಗಡಿಯ ಉಮೇಶ್ ಎಂಬುವರನ್ನು ಬಂಧಿತರು.
ಫೆ.3ರಂದು ಸ್ನೇಹಿತರೊಂದಿಗೆ ಜನ್ಮದಿನ ಆಚರಿಸಿಕೊಂಡ ಮಂಜುನಾಥ ರಾತ್ರಿ ಮನೆಗೆ ತೆರಳಿದ್ದರು. ಫೆ 4ರಂದು ಬೆಳಿಗ್ಗೆ ಆತನ ಶವ ಮತ್ತು ಬೈಕ್ ಕಿತ್ತನಾಮಂಗಲ ಕೆರೆಯಲ್ಲಿ ಪತ್ತೆಯಾಗಿತ್ತು. ಅದನ್ನು ಅಪಘಾತ ಪ್ರಕರಣ ಎಂದು ಬಿಂಬಿಸಲಾಗಿತ್ತು. ಈ ಶಂಕಾಸ್ಪದವಾಗಿ ಸಾವಿನ ಪ್ರಕರಣವನ್ನು ಪೊಲೀಸರು ಇದೀಗ ಯಶಸ್ವಿಯಾಗಿ ಬೇಧಿಸಿದ್ದಾರೆ.
ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ ತಾಲ್ಲೂಕಿನ ಸೀನಪ್ಪನಹಳ್ಳಿಯ ಮಂಜುನಾಥ (25) ಎಂಬುವರ ಶವ ಫೆ. 4ರಂದು ಕೆರೆಯಲ್ಲಿ ಪತ್ತೆಯಾಗಿತ್ತು. ಪತ್ನಿ ಹರ್ಷಿತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಕುಣಿಗಲ್ ಪೊಲೀಸರು ತನಿಖೆ ನಡೆಸಿದ್ದರು.


ಹಿನ್ನೆಲೆ: ಮಾಗಡಿ ತಾಲ್ಲೂಕಿನ ಒಂಭತ್ತುಗುಂಟೆ ಗ್ರಾಮದ ಹರ್ಷಿತಾ ವರ್ಷದ ಹಿಂದೆ ಮಂಜುನಾಥ ಅವರನ್ನು ಮದುವೆಯಾಗಿದ್ದರು. ಸಂಬಂಧದಲ್ಲಿ ಸಹೋದರನಾಗುವ ತನ್ನ ದೊಡ್ಡಮನ ಮಗ ರಘು ಜತೆ ಹರ್ಷಿತಾ ಅನೈತಿಕ ಸಂಬಂಧ ಹೊಂದಿದ್ದಳು. ರಘು ಜೊತೆ ಸೇರಿ ಆತನ ಸ್ನೇಹಿತ ಅರುಣ್ ಹಾಗೂ ಸಂಗಡಿಗರಿಗೆ 5 ಲಕ್ಷ ರೂ.ಗೆ ಗಂಡನ ಹತ್ಯೆಗೆ ಸುಪಾರಿ ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಫೆ.3ರಂದು ರಾತ್ರಿ ಮನೆಯಲ್ಲಿಯೇ ಮಂಜುನಾಥಗೆ ಕುತ್ತಿಗೆ ಬಿಗಿದು ಕೊಲೆ ಮಾಡಿ ಕಿತ್ತನಾಮಂಗಲ ಕೆರೆಯಲ್ಲಿ ಬೈಕ್ ಜತೆ ಶವ ಎಸೆದು ಬಂದಿದ್ದರು ಎಂದು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!