ಸಾರ್ವಜನಿಕರಿಂದ ರಿಯಾಯಿತಿ ದಂಡ ವಸೂಲಿ ಮಾಡಿದಂತೆ, ಪೊಲೀಸ್ ಇಲಾಖೆ ಹಾಗೂ ಎಲ್ಲಾ ಸರ್ಕಾರಿ ಇಲಾಖೆಯ ನೌಕರರಿಂದಲೂ ದಂಡ ವಸೂಲಿ ಮಾಡಲಾಗುತ್ತಿದೆಯೇ..????.

As concessional fines are collected from the public, fines are being collected from the employees of the police department and all government departments..????.

ಸರ್ಕಾರಿ ಇಲಾಖೆ

ದಾವಣಗೆರೆ: ರಾಜ್ಯ ಸರ್ಕಾರ ಸಂಚಾರಿ ನಿಯಮಗಳನ್ನು ಪಾಲಿಸದ ವಾಹನ ಸವಾರರಿಂದ ಬರಬೇಕಿದ್ದ ಬಾಕಿ ಉಸೂಲಿ ಮಾಡಲು ಫೆಬ್ರವರಿ 11ರ ತನಕ ಶೇಕಡ 50% ರಿಯಾಯಿತಿ ನೀಡಿರುವುದು ಸ್ವಾಗತಾರ್ಹ.
ಸಾರ್ವಜನಿಕರಿಂದ ಈ ನಿಯಮಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ರಾಜ್ಯದಲ್ಲಿ ಕೋಟ್ಯಂತರ ರೂಪಾಯಿ ಸರ್ಕಾರಕ್ಕೆ ಆದಾಯ ದೊರೆತಿದೆ, ಜಿಲ್ಲೆಯಲ್ಲಿಯೂ ಸಹ ಈ ನಿಯಮಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು ಲಕ್ಷಾಂತರ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ಆದಾಯದ ರೂಪದಲ್ಲಿ ಬಂದಿದ್ದು.
ಜಿಲ್ಲೆಯ ಸಾರ್ವಜನಿಕರಲ್ಲಿ ಒಂದು ಪ್ರಶ್ನೆ ಮೂಡಿದ್ದು, ಕೇವಲ ಸಾರ್ವಜನಿಕರ ವಾಹನಗಳ ಮೇಲೆ ಮಾತ್ರ ದಂಡ ಹಾಕಲಾಗಿದೆಯೋ ?? ಅಥವಾ ತಮ್ಮ ಇಲಾಖೆಯ ಹಾಗೂ ಇನ್ನಿತರ ಇಲಾಖೆಯ ಸಿಬ್ಬಂದಿಯ ವಾಹನಗಳ ಮೇಲು ಸಹ ದಂಡ ಹಾಕಲಾಗಿದೆಯೋ??? ಅವರ ಒಟ್ಟು ಬಾಕಿ ಎಷ್ಟು ಹಾಗೂ ಅವರಿಂದ ವಸೂಲದ ಬಾಕಿ ಏಷ್ಟು ಎಂಬ ಕುತೂಹಲವಿದ್ದು ದಕ್ಷ ಹಾಗೂ ಸದಾ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ನಮ್ಮ ಜಿಲ್ಲಾ ವರಿಷ್ಠಾಧಿಕಾರಿಗಳು ಇದರ ಬಗ್ಗೆ ಗಮನಹರಿಸಿ, ಸಾರ್ವಜನಿಕರ ಈ ಪ್ರಶ್ನೆಗೆ ಸಮರ್ಪಕ ಮಾಹಿತಿ ನೀಡಬೇಕಾಗಿ ವಿನಂತಿ.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!