ಆ.31 ರಿಂದ ಕಾರ್ಮಿಕ ಅದಾಲತ್: ಜಾಗೃತಿ ಪ್ರಚಾರ ಮೂಡಿಸುವ ವಾಹನಕ್ಕೆ ಚಾಲನೆ
ದಾವಣಗೆರೆ: ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಸಲ್ಲಿಸಿದ ಅರ್ಜಿಗಳನ್ನು ವಿಲೇವಾರಿ ಮಾಡಲು ಜಿಲ್ಲೆಯಲ್ಲಿ ಆ.31 ರಿಂದ ಸೆ.8 ರವರೆಗೆ ಆಯಾ ತಾಲ್ಲೂಕಿನ ಕಾರ್ಮಿಕ ಇಲಾಖೆಯ ಕಚೇರಿ ಆವರಣದಲ್ಲಿ ‘ಕಾರ್ಮಿಕ ಅದಾಲತ್’ ಆಯೋಜಿಸಲಾಗಿದೆ.
ಆ.31 ರಂದು ದಾವಣಗೆರೆ ತಾಲ್ಲೂಕಿನ ಅರ್ಜಿಗಳನ್ನು ದಾವಣಗೆರೆಯ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಛೇರಿಯಲ್ಲಿ ಕಾರ್ಮಿಕ ಅದಾಲತ್ ನಡೆಸಲಾಗುವುದು. ಅದೇ ರೀತಿ ಸೆ.02 ರಂದು ಹರಿಹರ ಕಾರ್ಮಿಕ ನಿರೀಕ್ಷಕರ ಕಛೇರಿ, ಸೆ.04 ರಂದು ಚನ್ನಗಿರಿ, ಸೆ.06 ರಂದು ಹರಪನಹಳ್ಳಿ, ಸೆ.07 ರಂದು ಜಗಳೂರು, ಸೆ.08 ರಂದು ಹೊನ್ನಾಳಿ ಕಾರ್ಮಿಕ ನಿರೀಕ್ಷಕರ ಕಛೇರಿಯ ಆವರಣಗಳಲ್ಲಿ ಕಾರ್ಮಿಕ ಅದಾಲತ್ ನಡೆಯಲಿದೆ.
ಕಾರ್ಮಿಕರು ಸಲ್ಲಿಸಿರುವ ಅರ್ಜಿಗಳ ಬಗ್ಗೆ ಮಾಹಿತಿ ಪಡೆಯಲು ಹಾಗೂ ಸ್ಥಳದಲ್ಲೇ ದಾಖಲೆಗಳನ್ನು ಸಲ್ಲಿಸಿ ನ್ಯೂನತೆ ಸರಿಪಡಿಸಿಕೊಳ್ಳಲು ಅದಾಲತ್‌ನಲ್ಲಿ ಅವಕಾಶ ಒದಗಿಸಲಾಗುತ್ತದೆ. ಹೀಗಾಗಿ ಕಾರ್ಮಿಕರು ಈ ಅದಾಲತ್‌ನಲ್ಲಿ ಭಾಗವಹಿಸಿ ಕಡತ ವಿಲೇವಾರಿ ಮಾಡಲು ಸಹಕರಿಸಬೇಕು.
ಹೆಚ್ಚಿನ ಮಾಹಿತಿಗೆ ಸ್ಥಳೀಯ ಕಾರ್ಮಿಕ ಇಲಾಖೆಯ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್ ತಿಳಿಸಿದ್ದಾರೆ.
ಪ್ರಚಾರ ವಾಹನಕ್ಕೆ ಚಾಲನೆ : ಕಾರ್ಮಿಕ ಇಲಾಖಾವತಿಯಿಂದ ಜಿಲ್ಲೆಯಲ್ಲಿ ಆ.31 ರಿಂದ ಸೆ.08 ರವರೆಗೆ ಆಯಾ ತಾಲ್ಲೂಕಿನ ಕಾರ್ಮಿಕ ಇಲಾಖೆಯ ಕಛೇರಿ ಆವರಣದಲ್ಲಿ ಕಾರ್ಮಿಕ ಅದಾಲತ್ ಆಯೋಜಿಸಿದ್ದು ಕಾರ್ಮಿಕ ಅದಾಲತ್ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ಕಾರ್ಮಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಳ್ಳಲಾದ ಆಟೋ ಪ್ರಚಾರ ಕಾರ್ಯಕ್ಕೆ ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್ ದಾವಣಗೆರೆಯಲ್ಲಿ ಶುಕ್ರವಾರದಂದು ಚಾಲನೆ ನೀಡಿದರು.