ಅವಧಿ ಮೀರಿದ 4.83 ಲಕ್ಷ ಮೌಲ್ಯದ 2650 ಲೀ. ಬಿಯರ್ ನಾಶ
ದಾವಣಗೆರೆ: ಮಾರಾಟವಾಗದೇ ಬಾಕಿ ಉಳಿದಿದ್ದ ಅಲ್ಲದೆ ಅವಧಿ ಮೀರಿದ ಸುಮಾರು 4.83 ಲಕ್ಷ ರೂ., ಮೌಲ್ಯದ ಬಿಯರ್ ಅನ್ನು ಹರಿಹರದ ಕೆ.ಎಸ್.ಬಿ.ಸಿ.ಎಲ್ ಲಿಕ್ಕರ್ ಡಿಪೋ ಆವರಣದಲ್ಲಿ ನಾಶಪಡಿಸಲಾಯಿತು.
ಅವಧಿ ಮೀರಿದ, ಸೇವನೆಗೆ ಯೋಗ್ಯವಲ್ಲದ, ಸುಮಾರು 328 ಪೆಟ್ಟಿಗೆಗಳ ಒಟ್ಟು 2650 ಲೀಟರ್ ಅಂದಾಜು 4.83 ಲಕ್ಷ ರೂ. ಮೌಲ್ಯದ ವಿವಿಧ ಮಾದರಿಯ ಬಿಯರ್ ಅನ್ನು ಕೆ.ಎಸ್.ಬಿ.ಸಿ.ಎಲ್ ಡಿಪೋ ಹಾಗೂ ಪಂಚರ ಸಮಕ್ಷಮ ನಿಯಮಾನುಸಾರ ಡಿಪೋ ಆವರಣದಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಈಚೆಗೆ ನಾಶಪಡಿಸಲಾಯಿತು ಎಂದು ಅಬಕಾರಿ ಉಪ ಆಯುಕ್ತ ಬಿ.ಶಿವಪ್ರಸಾದ್ ತಿಳಿಸಿದ್ದಾರೆ