ರಾಷ್ಟ್ರಮಟ್ಟದ ಕರಾಟೆಯಲ್ಲಿ ಗೋಲ್ಡನ್‌ಸ್ಟಾರ್ ಕರಾಟೆ ವಿದ್ಯಾರ್ಥಿಗಳಿಗೆ ಬಹುಮಾನ

ಗೋಲ್ಡನ್‌ಸ್ಟಾರ್ ಕರಾಟೆ
ದಾವಣಗೆರೆ: ಬ್ರೈಟ್‌ಸ್ಟಾರ್ ಕರಾಟೆ ಅಸೋಸಿಯೇಷನ್ ವತಿಯಿಂದ ಈಚೆಗೆ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ದಾವಣಗೆರೆಯ ಗೋಲ್ಡನ್‌ಸ್ಟಾರ್ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ.
ಎಲ್.ಆರ್. ಲಿಖಿತ್ ಮತ್ತು ಆರ್. ಆದಿತ್ಯ ಇವರು ಕುಮಿತೆಯಲ್ಲಿ ಪ್ರಥಮ ಹಾಗೂ ಕತಾ ವಿಭಾಗದಲ್ಲಿ ದ್ವಿತೀಯ, ಎಂ.ವೈ. ಖಾಸಿಫ್ ಅಮಾನ್ ಕುಮಿತೆ ಮತ್ತು ಕತಾ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ ಎಂದು ತರಬೇತುದಾರರಾದ ಸಿ. ರಾಮಚಂದ್ರ ಹಾಗೂ ಆನಂದಕುಮಾರ ಎ. ಮೊದಲಿಯಾರ್ ತಿಳಿಸಿದ್ದಾರೆ.