ಮಾನಸಿಕ ಖಿನ್ನತೆ ಕುರಿತು ಅರಿವು.

ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಆಯೋಜಿಸಿಲಾಗಿತ್ತು. ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಪ್ರಭಾರಿ ಪ್ರಾಂಶುಪಾಲರಾದ ಪ್ರೊ ಭೀಮಣ್ಣ ಸುಣಗಾರ್ ರವರು ವಹಿಸಿದ್ದರು .ಕಾರ್ಯಕ್ರಮದಲ್ಲಿ ಆರೋಗ್ಯದ ಬಗ್ಗೆ ಹಾಗೂ ಮಾನಸಿಕ ಖಿನ್ನತೆ ಬಂದಾಗ ಹೆಗೆ ಹೊರಬರಬೆಕೆಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ”ಮಾನಸಿಕ ಆರೋಗ್ಯದ ಕುರಿತು ” ವಿದ್ಯಾರ್ಥಿ ಗಳಿಗೆ ಕಿರು ಪ್ರಬಂಧ ಸ್ಪರ್ಧೆ ಯನ್ನು ಏರ್ಪಡಿಸಲಾಗಿತ್ತು.ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು. ಬಹುಮಾನ ವಿತರಣೆಯನ್ನು ಅದ್ಯಕ್ಷರಾದ ಭೀಮಣ್ಣ . ಸುಣಗಾರ ಅಧೀಕ್ಷರಾದ ಪ್ರತಿಭಾ ನೇರವೇರಿಸಿದರು .ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪದ್ಮಾವತಿ. ಆಪ್ತ ಸಮಾಲೋಚಕರಾದ ಪೂಜಾ ಜಿ ಎಂ.,ದುಶ್ಯಂತ್ ರಾಜ್ ,ಹಾಗೂ ಪ್ರಭಾರಿ ಪ್ರಾಂಶುಪಾಲರಾದ ಪ್ರೊ ಭೀಮಣ್ಣ ಸುಣಗಾರ್ . ಕಾಲೇಜಿನ ಅದಿಕ್ಷಕರಾದ ಪ್ರತಿಭಾ. ಪ್ರೊ ಸುರೇಶ್ .ಪ್ರೊ ರಶ್ಮಿ. ಪ್ರೊ ಮೇಘ. ಪ್ರೊ ರವಿ ಕುಮಾರ್ , ರಮ್ಯ ಉಪಸ್ಥಿತರಿದ್ದರು.