ನಿರಂತರ ಕಲಿಕೆ ಜ್ಞಾನಾಭಿವೃದ್ಧಿಗೆ ಪೂರಕ : ಪ್ರೊ. ಬಾಬು

IMG-20211115-WA0164

ದಾವಣಗೆರೆ:ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ನಿರಂತರ ಕಲಿಕೆಗೆ ಮನಸ್ಸು ಮಾಡಿದರೆ ಅವರ ಜ್ಞಾನಾಭಿವೃದ್ಧಿಗೆ ಅದು ಪೂರಕವಾಗುತ್ತದೆ ಹಾಗೂ ಅನಿರಂತರ ಕಲಿಕೆ ಜ್ಞಾನಾಭಿವೃದ್ಧಿಗೆ ಪೂರಕ  ದೊಡ್ಡ ಸಾಧನೆಗೆ ಸಹಾಯವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಾದ ವೆಂಕಟೇಶ್ ಬಾಬು ಅವರು ಅಭಿಪ್ರಾಯ ಪಟ್ಟರು.

ಅವರು ಇಂದು ನಗರದ ಬಿಎಸ್ ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪುನಶ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಬಹುದೊಡ್ಡ ಗುರಿಯನ್ನು ಹೊಂದಿರಬೆಕಾಗುತ್ತದೆ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಗುರಿಯನ್ನು ಹೊಂದುವುದು ಅವಶ್ಯ ಗುರಿ ಯಾವಾಗಲೂ ದೊಡ್ಡದಾಗಿರಲಿ. ಸಣ್ಣ ಗುರಿಯೆ ಅಪರಾಧ ಎಂಬುದನ್ನು ನಾವು ಯಾವತ್ತೂ ಮರೆಯಬಾರದು ನಮ್ಮ ಸಾಮರ್ಥ್ಯವೂ ದೊಡ್ಡ ಗುರಿಯನ್ನು ಸಾಧಿಸುವ೦ತಿದ್ದರೆ ಚಿಕ್ಕ ಗುರಿಯ ಕಡೆಗೆ ಮನಸ್ಸು ಮಾಡಿದರೆ ಪ್ರಯೋಜನವೇನು ಸಾಧನೆಗೆ ಗುರಿ ಬಹುಮುಖ್ಯ ಎಂದು ಹೇಳಿದರು
ಗುರಿ ಸಾಧಿಸಲು ಸತತ ಪ್ರಯತ್ನ ಆತ್ಮವಿಶ್ವಾಸ ನಂಬಿಕೆ ಛಲ ಹಾಗೂ ಧನಾತ್ಮಕ ಮನೋಭಾವ ಮತ್ತು ಸಮಯಪ್ರಜ್ಞೆ ಇದ್ದರೆ ಅದು ಸಾಧನೆಗೆ ಸಹಾಯವಾಗಿ ಯಶಸ್ಸು ನಿಮ್ಮ ಕೈಯಲ್ಲಿರುತ್ತದೆ ಎಂದು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯನ್ನು ತುಂಬಿದರು
ಹಾಗೇ ಮುಂದುವರಿದು ಮಾತನಾಡುತ್ತಾ ರಾಷ್ಟ್ರೀಯ ಶಿಕ್ಷಣ ನೀತಿಯ ಮೊದಲ ವರ್ಷದ ವಿದ್ಯಾರ್ಥಿಗಳು ನೀವಾಗಿರುತ್ತೀರಿ ಓದುವಾಗ ನೀತಿಯ ಬಗ್ಗೆ ತಿಳಿದುಕೊಂಡರೆ ಒಳಿತು ರಾಷ್ಟ್ರೀಯ ಶಿಕ್ಷಣ ನೀತಿಯು ಕೌಶಲ್ಯ ಆಧಾರಿತ ಶಿಕ್ಷಣವನ್ನು ನೀಡುವಲ್ಲಿ ಹಾಗೂ ಯುವಜನತೆಯನ್ನು ಉದ್ಯೋಗಸ್ಥರನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯು ಸಮರ್ಪಕವಾಗಿ ಜಾರಿಗೆ ತರಲು ಸರ್ಕಾರವು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ. ವಿದ್ಯಾರ್ಥಿಗಳಿಗೆ ಕಲಿಯುವ ಮತ್ತು ಕೌಶಲ್ಯ ಬೆಳೆಸಿಕೊಳ್ಳುಲು ಅನುಕೂಲವಾಗುವಂಥ ರೀತಿಯನ್ನು ರೂಪಿಸುವಲ್ಲಿ ಸರ್ಕಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ ಬಿ ಸಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಕೆ ಷಣ್ಮುಖ ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಜ್ಞಾನಾಭಿವೃದ್ಧಿ ಬೇಕಾಗುವ ಎಲ್ಲಾ ಕೌಶಲ್ಯಗಳನ್ನು ವೃದ್ಧಿಸಿಕೊಂಡು ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ಹೇಳಿದರು
ಬಿ ಎಸ್ ಚನ್ನಬಸಪ್ಪ ಕಾಲೆಜಿನ ಪ್ರಾಂಶುಪಾಲರಾದ ಶ್ರೀ ಗುರು ಎಂ ಸಿ ಯವರು ಮಾತನಾಡುತ್ತಾ ಸಂಪನ್ಮೂಲ ವ್ಯಕ್ತಿಗಳಿಂದ ಸಿಗುವ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳು ಬಳಸಿ ತಾವು ಏನಾಗಬೇಕು ಎಂಬುದನ್ನು ಅರಿತು ಅದರೆಡೆಗೆ ಪ್ರಯತ್ನ ಪಟ್ಟರೆ ಅದು ಕಾರ್ಯಕ್ರಮದ ಫಲ ಎಂದು ಹೇಳಿದರು.
ಕಾರ್ಯಕ್ರಮವನ್ನು ಉಪನ್ಯಾಸಕ ರಾದ ಸಂತೋಷ್ ನಿರೂಪಿಸಿದರು ಶ್ರೀಮತಿ ಕಿರಣ್ ಅವರು ಅತಥಿಗಳನ್ನು ಸ್ವಾಗತಿಸಿದರು ಶ್ರೀಮತಿ ರೇಖಾ ಅವರು ಅತಿಥಿಗಳನ್ನು ಪರಿಚಯಿಸಿದರೆ ಶ್ರೀಮತಿ ಅನುಷಾ ಅವರು ವಂದಿಸಿದರು ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!