ಲೋಕಲ್ ಸುದ್ದಿ

ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದ ಬಹುಜನ ಸಮಾಜ ಪಾರ್ಟಿ ಬೀಡಿ ಕಾಲೋನಿ ಸಮಸ್ಯೆಗಳ ನಿವಾರಣೆಗೆ ನಡೆಯುತ್ತಿದ್ದ ಧರಣಿ

ದಾವಣಗೆರೆ: ಹರಿಹರ ನಗರದ ಬೀಡಿ ಕಾರ್ಮಿಕ ಕಾಲೋನಿಯ ಸಮಸ್ಯೆಗಳ ಕುರಿತು ನಡೆಸುತ್ತಿರುವ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದಿರುವುದಾಗಿ ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಹೆಚ್.ಮಲ್ಲೇಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 12 ವರ್ಷಗಳಿಂದ ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ವಾಸವಾಗಿದ್ದ ಈ ಭಾಗದ ನಿವಾಸಿಗಳಿಗೆ ಯಾವುದೇ ರೀತಿ ಮೂಲಭೂತ ಸೌಕರ್ಯಗಳು ಇಲ್ಲದೆ, ನಗರಸಭೆಗೂ ವಹಿಸಿಕೊಳ್ಳದೆ 103 ಕುಟುಂಬಗಳು ತೊಂದರೆ ಅನುಭವಿಸುತ್ತಿದ್ದರು.
ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಕುಟುಂಬಗಳಿಗೆ ಹಕ್ಕುಪತ್ರ ನೀಡಿ ಖಾತೆ ಮಾಡಿಸಿಕೊಡಬೇಕೆಂದು ಕಳೆದ ನ.29ರಂದು ಧರಣಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ, ಹರಿಹರ ಪೌರಾಯುಕ್ತರು ಸಂಬಂಧಪಟ್ಟ ಇಲಾಖಾಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿದ ಅಧಿಕಾರಿಗಳೊಂದಿಗೆ ಜ.16ರಂದು ಜಿಲ್ಲಾಧಿಕಾರಿ ಸಮಕ್ಷಮ ಚರ್ಚೆ ನಡೆಸಿ, ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಫೆ.3ರಂದು ತಹಶೀಲ್ದಾರ್ ಅವರು ತಾಲ್ಲೂಕು ಕೇಚಿರಯಲ್ಲಿ ನಮ್ಮ ಸಮಕ್ಷಮ ಪೌರಾಯುಕ್ತರನ್ನು ಕರೆಸಿ ಶೀಘ್ರ ಸೂಕ್ತಾನುಸಾರ ಕ್ರಮ ಕೈಗೊಳ್ಳುವಂತೆ ಭರವಸೆ ನೀಡಿದ್ದರು.
ಆದಾಗ್ಯೂ ಪ್ರತಿ ಮನೆಯ ಸಮೀಕ್ಷೆ ನಡೆಸುವವರೆಗೆ ಧರಣಿ ಕೈ ಬಿಟ್ಟಿರಲಿಲ್ಲ. ಆದರೆ ಫೆ.6ರಂದು ಪೌರಾಯುಕ್ತರು ಬೀಡಿ ಕಾರ್ಮಿಕ ಕಾಲೋನಿಯಲ್ಲಿರುವ ಮನೆಗಳಿಗೆ ಖುದ್ದು ಭೇಟಿ ನೀಡಿ ಸಮೀಕ್ಷೆ ನಡೆಸಿ ಫಲಾನುಭವಿಗಳನ್ನು ಗುರುತಿಸಿ ಮಾಹಿತಿ ಪಡೆದಿರುವ ಮೇರೆಗೆ ಹಾಗೂ ಇನ್ನೂ 15 ದಿನದೊಳಗೆ ಹಕ್ಕುಪತ್ರ, ಸಾಲಮನ್ನಾ ಪತ್ರ ಹಾಗೂ ಖಾತೆ ನೋಂದಣಿ ಮಾಡಿಸಿಕೊಡುವ ಭರವಸೆ ಮೇರೆಗೆ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಾರ್ಟಿಯ ಜಿಲ್ಲಾಧ್ಯಕ್ಷ ಡಿ.ಹನುಮಂತಪ್ಪ, ಮುಕ್ತಿಯಾರ್ ಅಹಮ್ದ್, ರಜಿಕ್ ವುಲ್ಲಾ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!