ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ ಉಪನಗರ ರೈಲು ಯೋಜನೆ: 268 ಮರ ಕಡಿಯಲು ಬಿಬಿಎಂಪಿ
ಬೆಂಗಳೂರು: ಬೆಂಗಳೂರಿನ ಬೈಯಪ್ಪನಹಳ್ಳಿ ಮತ್ತು ಚಿಕ್ಕಬಾಣಾವರ ನಡುವಿನ ಉಪನಗರ ರೈಲು ಮಾರ್ಗದ ಮಲ್ಲಿಗೆ ಕಾರಿಡಾರ್ ನಿರ್ಮಾಣಕ್ಕಾಗಿ 268 ಮರಗಳನ್ನು ಕಡಿಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅರಣ್ಯ ವಿಭಾಗ ಒಪ್ಪಿಗೆ ಸೂಚಿಸಿದೆ. ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಕೆ-ರೈಡ್‌ನಿಂದ 661 ಮರಗಳನ್ನು ಕಡಿಯುವ ಪ್ರಸ್ತಾವನೆ ಸಲ್ಲಿಸಿತ್ತು. ಅದಕ್ಕೆ ಅರಣ್ಯ ಕೋಶ ಸಾರ್ವಜನಿಕ ಪ್ರಕಟಣೆಯನ್ನು ಪ್ರಕಟಿಸಿ ಒಂದು ವರ್ಷದ ನಂತರ, ಬಿಬಿಎಂಪಿಯ ವೃಕ್ಷ ತಜ್ಞರ ಸಮಿತಿಯು 268 ಮರಗಳನ್ನು ಕಡಿಯಲು ಅನುಮತಿ ನೀಡಲು ನಿರ್ಧರಿಸಿದೆ.
ಈ ಕುರಿತು ಸಾರ್ವಜನಿಕರಿಂದ ಬಿಬಿಎಂಪಿಗೆ ಯಾವುದೇ ಆಕ್ಷೇಪಣೆಗಳು ಬಂದಿಲ್ಲ ಎಂದು ಹೇಳಲಾಗಿದೆ. ಕಡಿಯಲು ಗುರುತಿಸಲಾದ 268 ಮರಗಳು ಹಾಗೂ ಗುರುತಿಸಲಾದ 315 ಮತ್ತು ಸ್ಥಳಾಂತರಕ್ಕಾಗಿ 58 ಅನ್ನು ಮೂಲ ಪ್ರಸ್ತಾವನೆಯ ಸಂಖ್ಯೆ 661ಕ್ಕೆ ಒಳಗೊಂಡಿಲ್ಲ. ಯಶವಂತಪುರ ಸುತ್ತಮುತ್ತಲಿನ ನಾಲ್ಕು ಕಡೆ ಮರಗಳನ್ನು ಸ್ಥಳಾಂತರಿಸವಂತೆ ಅರಣ್ಯ ವಿಭಾಗ ಶಿಫಾರಸು ಮಾಡಿದೆ.