ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜು; ಪೊಲೀಸ್ ಬಿಗಿ ಭದ್ರತೆ

ಬೆಂಗಳೂರು: ಇಂದು ಮಧ್ಯರಾತ್ರಿ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ದೇಶದ ಜನ ಸಜ್ಜಾಗಿದ್ದಾರೆ. ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬ್ರಿಗೇಡ್, ಎಂಜಿ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಅವಕಾಶ ನೀಡಲಾಗಿಡಿದೆ. ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 1 ಗಂಟೆವರೆಗೆ ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಮುಂಜಾಗ್ರತ ಕ್ರಮವಾಗಿ ಭಧ್ರತೆಗೆ 8,500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದ್ದು, ಎಂ.ಜಿ ರಸ್ತೆ, ಬ್ರಿಡೇಗ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ಕೆಲವೊಂದು ಪ್ರದೇಶಗಳಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ವಾಹನ ಹಾಗೂ ತುರ್ತು ವಾಹನ ಸಂಚಾರಕ್ಕೆ ಮಾತ್ರ ಅವಕಾಶ ನೀಡಿ ಉಳಿದೆಲ್ಲಾ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಆದೇಶಿಸಲಾಗಿದೆ.

ಇಂದು ಸಂಜೆ 4 ರಿಂದ ಮಧ್ಯರಾತ್ರಿ 3ವರೆಗೆ ಕೆಲವೊಂದು ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ನಿರ್ಭಂದ ಹೇರಲಾಗಿದೆ. ಎಂಜಿ ರಸ್ತೆ- ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದ‌ವರೆಗೆ, ಬ್ರಿಗೇಡ್ ರಸ್ತೆ – ಆರ್ಟ್ ಕ್ರ್ಯಾಫ್ಟ್ ಜಂಕ್ಷನ್​ನಿಂದ ಅಪೇರಾ ಜಂಕ್ಷನ್​ವರೆಗೆ, ಚರ್ಚ್ ಸ್ರ್ಟೀಟ್ ರಸ್ತೆ- ಬ್ರಿಗೇಡ್ ರಸ್ತೆಯಿಂದ ಸೆಂಟ್ ಮಾರ್ಕ್ಸ್ ಜಂಕ್ಷನ್​ವರೆಗೆ, ರೆಸ್ಟ್ ಹೌಸ್ ರಸ್ತೆ – ಬ್ರಿಗೇಡ್‌ ರಸ್ತೆ ಜಂಕ್ಷನ್​​ನಿಂದ ಮ್ಯೂಸಿಯಂ ರಸ್ತೆಯ ಜಂಕ್ಷನ್​ವರೆಗೆ, ಮ್ಯೂಸಿಯಂ ರಸ್ತೆಯಲ್ಲಿ – ಎಂಜಿ ರಸ್ತೆ ಜಂಕ್ಷನ್​ನಿಂದ ಎಸ್.ಬಿ.ಐ ವೃತ್ತದವರೆಗೆ ಸಂಜೆ 4 ಘಂಟೆಯ ಒಳಗಾಗಿ ವಾಹನ ತೆರವುಗೊಳಿಸುವುದಕ್ಕೆ ಸೂಚನೆ ನೀಡಲಾಗಿದೆ. ಪೊಲೀಸ್​ ವಾಹನ ಸೇರಿದಂತೆ ತುರ್ತು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶವಿದ್ದು, ನಿಯಮ ಉಲ್ಲಂಘಿಸಿದರೆ ಪೊಲೀಸರು ದಂಡ ವಿಧಿಸಲಿದ್ದಾರೆ.

ನಗರದಲ್ಲಿ ಭದ್ರತೆಗಾಗಿ 8,500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆಯಲ್ಲಿ ಬಂದೋಬಸ್ತ್​ ಕೈಗೊಳ್ಳಲಾಗಿದ್ದು, ನಾಲ್ವರು ಡಿಸಿಪಿ, 10 ಎಸಿಪಿ ಸೇರಿ 3 ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ನಗರದಲ್ಲಿ 160 ಇನ್ಸ್​ಪೆಕ್ಟರ್​, 600 ಪಿಎಸ್​ಐ, 800 ಎಎಸ್​ಐ, 1800 ಹೆಡ್​ಕಾನ್ಸ್​ಟೇಬಲ್​, 5200 ಕಾನ್ಸ್​ಟೇಬಲ್​ಗಳ ನಿಯೋಜನೆ ಮಾಡಲಾಗಿದೆ. ಎಂ.ಜಿ.ರಸ್ತೆಯ ಪ್ರವೇಶದ್ವಾರದಲ್ಲಿ ಮೆಟಲ್ ಡಿಟೆಕ್ಟರ್​ಗಳನ್ನು ಅಳವಡಿಸಲಾಗಿದ್ದು, ಕೋರಮಂಗಲ, ಇಂದಿರಾನಗರ, ವೈಟ್​ಫೀಲ್ಡ್​ ಪ್ರದೇಶದಲ್ಲೂ ಭದ್ರತೆ ಕೈಗೊಳ್ಳಲಾಗಿದೆ. 2500 ಪೊಲೀಸರ ನಿಯೋಜನೆ ಮಾಡುವುದರ ಜೊತೆಗೆ 20 ಡ್ರೋನ್​ ಕ್ಯಾಮರಾಗಳ ಬಳಕೆ ಮಾಡಲಾಗುತ್ತಿದೆ. ರಾತ್ರಿ 1 ಗಂಟೆಯವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ ನೀಡಲಾಗಿದ್ದು, ಅವಧಿ ಮೀರಿ ಸಂಭ್ರಮಾಚರಣೆಯಲ್ಲಿ ತೊಡಗಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಅಲ್ಲದೆ ಸುರಕ್ಷತೆಗಾಗಿ ವಾಚ್​ಟವರ್ ಮತ್ತು ಮಹಿಳಾ ಸುರಕ್ಷತಾ ಕೊಠಡಿಗಳನ್ನು ಪೊಲೀಸರು ನಿರ್ಮಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!