ರಾಜ್ಯ ಸುದ್ದಿ

ಬೆಂಗಳೂರು-ಮೈಸೂರು ಹೆದ್ದಾರಿ ನ್ಯೂನತೆ; ಕಾಮಗಾರಿ ಸರಿಪಡಿಸಲು ಗಡ್ಕರಿ ಅತ್ತು

ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯಲ್ಲಿನ ನ್ಯೂನತೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಮಂಡ್ಯಾ ಸಂಸದೆ ಸುಮಲತಾ ಅಂಬರೀಶ್ ಅವರೇ ಈ ಬಗ್ಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಗಮನಸೆಳೆದಿದ್ದಾರೆ.
ಸಂಸತ್ ಅಧಿವೇಶನದ ನಡುವೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ಸುಮಲತಾ ಅಂಬರೀಶ್, ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ನ್ಯೂನ್ಯತೆ ಬಗ್ಗೆ ಗಮನಸೆಳೆದರು. ಈ ನ್ಯೂನತೆಗಳನ್ನು ಕೂಡಲೇ ಬಗೆಹರಿಸುವಙಂತೆ ಮನವಿ ಮಾಡಿದರು. ಅದೇ ವ್ಯಾಪ್ತಿಯಲ್ಲಿ ಮಂಡ್ಯದಲ್ಲಿ ವರ್ತುಲ ರಸ್ತೆ ನಿರ್ಮಾಣ, ರಸ್ತೆ ಅಗಲೀಕರಣ, ವೈಟ್ ಟಾಪಿಂಗ್, ಫುಟ್ ಪಾತ್, ಒಳ ಚರಂಡಿ ಕಾಮಗಾರಿ ಬಗ್ಗೆ ಮನವಿ ಮಾಡಿದ್ದಾಗಿ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಗಡ್ಕರಿ ಅವರು ಕಾಮಗಾರಿಗೆ ಅನುಮತಿಸಿದ್ದಾರೆ ಎಂದು ಸುಮಲತಾ ಅಂಬರೀಶ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಮಿಮ್ಸ್ ಆವರಣದಲ್ಲಿಯೇ Trauma Care Centre  ನಿರ್ಮಾಣ ಮಾಡಲು ಕೂಡ ಅವರಲ್ಲಿ ಕೋರಿದ್ದೇನೆ. ನನ್ನ ಮನವಿಗೆ ಸ್ಪಂದಿಸಿ ಮಂಡ್ಯ ನಗರದ ಪ್ರಮುಖ ವೃತ್ತಗಳಲ್ಲಿ ಪಾದಾಚಾರಿಗಳಿಗೆ ಅನುಕೂಲವಾಗುವಂತೆ ಮೇಲ್ಸೇತುವೆಗಳನ್ನು ನಿರ್ಮಿಸುವ ಕಾಮಗಾರಿಗೆ ಅನುಮೋದನೆ ನೀಡಿ ಅನುದಾನ ಬಿಡುಗಡೆಗೊಳಿಸಿರುವ ಸಚಿವರಿಗೆ ಧನ್ಯವಾದಗಳು ಎಂದವರು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!