ಬಣಜಾರ ಪಾನ್ ಇಂಡಿಯಾ ಚಿತ್ರ ಏ.1 ಕ್ಕೆ ಬಿಡುಗಡೆ
ದಾವಣಗೆರೆ: ಸೇವಾ ದಾಸ್ ಬಣಜಾರ ಪಾನ್ ಇಂಡಿಯಾ ಚಲನಚಿತ್ರವು ಬರುವ ಏಪ್ರಿಲ್ 1ರಂದು ರಾಜ್ಯ ಮತ್ತು ನೆರೆಯ ರಾಜ್ಯಗಳಲ್ಲಿ ಬಿಡುಗಡೆ ಆಗಲಿದೆ ಎಂದು ನಾಯಕ ನಟ ಚಂದು ವಿ ರಾಜಾನಾಯ್ಕ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಗಾದಿ ದಿನದಂದೇ ಈ ಚಿತ್ರ ರಾಜ್ಯಾದ್ಯಂತ ಸೇರಿದಂತೆ ವಿವಿಧ ಆರೇಳು ರಾಜ್ಯಗಳಲ್ಲಿ ಬಿಡುಗಡೆ ಆಗಲಿದೆ. ಬಣಜಾರ ಸಮುದಾಯದ ಜನರ ಸಂಸ್ಕöತಿಯನ್ನು ತೋರಿಸುವ ನಿಟ್ಟಿನಲ್ಲಿ ಈ ಈ ಚಿತ್ರವನ್ನು ಚಿತ್ರೀಕರಿಸಲಾಗಿದ್ದು, ಸಂಪೂರ್ಣ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆದಿದೆ. 6 ಕೋಟಿ ವೆಚ್ಚದಲ್ಲಿ ಚಿತ್ರೀಕರಣ ಸಿನಿಮಾ ತಯಾರಾಗಿದೆ ಎಂದು ಮಾಹಿತಿ ನೀಡಿದರು.
ಪ್ರಥಮ ಹಂತವಾಗಿ ರಾಜ್ಯದ ಐವತ್ತು ಚಿತ್ರಮಂದಿರಗಳಲ್ಲಿ ಅಲ್ಲದೇ ಬಂಜಾರ ಜನಾಂಗ ಹೆಚ್ಚಾಗಿ ಇರುವ ರಾಜ್ಯಗಳಾದ ರಾಜಸ್ಥಾನ ಸೇರಿದಂತೆ ವಿವಿಧ ಕಡೆಗಳಲ್ಲಿ ಈ ಚಿತ್ರ ಬಿಡುಗಡೆಗೊಳ್ಳಲಿದೆ ಎಂದರು. ಸೇವಾದಾಸ್ ಸಿನಿಮಾದಲ್ಲಿ ಬಂಜಾರ ಜನಾಂಗದ ವಿವಾಹ ಸನ್ನಿವೇಶಗಳು, ತೀಜ್ ಗೋರ್ ಸಂಸ್ಕöತಿ, ಶೀತ್ಲಾ ಹಬ್ಬಗಳ ಆಚರಣೆ, ಹಾಸ್ಯ ಪ್ರಸಂಗಗಳು, ಭಾವನಾತ್ಮಕ ಸನ್ನಿವೇಶಗಳು ಸೇರಿದಂತೆ ಕುಟುಂಬದವರು ಎಲ್ಲರೂ ಒಟ್ಟಾಗಿ ಕುಳಿತು ನೋಡಬಹುದಾದ ಚಿತ್ರ ಇದಾಗಿದೆ. ಸಿನಿಮಾದ ನಿರ್ದೇಶನವನ್ನು ಕೆಪಿಎನ್ ಚವಾಣ್ ನೆರವೇರಿಸಿದ್ದು, ವಿನೋದ್ ರೈನಾ ನಿರ್ಮಾಪಕರಾಗಿದ್ದಾರೆ. ಇದರಲ್ಲಿ ನಾಯಕ ನಟಿಯಾಗಿ ಪ್ರೀತಿ ಹಸ್ತಾನಿ, ಸುಮನ್, ಚಂದೂ ವಿ ರಾಜ ನಾಯ್ಕ ಇತರರು ತಾರಾ ಬಳಗದಲ್ಲಿ ಇದ್ದು, ಎಲ್ಲಾ ಭಾಷೆಯ ಜನರಿಗೆ ಅರ್ಥ ಆಗುವ ರೀತಿಯಲ್ಲಿ ತಯಾರಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪುಟ್ಟನಾಯ್ಕ, ಸುಧಾಕರನಾಯ್ಕ ಬಜಾರ್ ರಾಮ್, ವಿನೋದ್ ರಾಥೋಡ್, ಸಿದ್ದು ನಾಯರ್, ವಿನೋದ್ ನಾಯಕ್, ವಿಶಾಲ್ ನಾಯಕ್, ರುದ್ರಾಕ್ಷಿ ಬಾಯಿ ಪುಟ್ಟನಾಯ್ಕ, ಶೀತಲ್ ಜಿ.ನಾಯ್ಕ, ಗಾಯಕ ಕುಬೇರ ನಾಯ್ಕ್ ಸೇರಿದಂತೆ ಇನ್ನಿತರರು ಇದ್ದರು.