ಬಸಾಪುರ ಸರ್ಕಾರಿ ಶಾಲೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

- ದಾವಣಗೆರೆ: ಬಸಾಪುರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಪಾಲಿಕೆ 21 ನೇ ವಾರ್ಡಿನ ಬಸಾಪುರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಿದ್ದಾರ್ಥ್ ಅಧ್ಯಕ್ಷತೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ ನಡೆಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ನಾಗವೇಣಿ ನೂತನ ಸದಸ್ಯರುಗಳಾದ ತಿಪ್ಪೇಶ್, ಮಹಾಂತೇಶ್, ನಿಂಗಪ್ಪ, ರಮೇಶ್, ಗುರುಸಿದ್ದಯ್ಯ, ಹಾಲೇಶ್, ದೇವಿರಮ್ಮ, ಆಶಾ, ಸುನೀತ,ಭವ್ಯ, ಸುಮಿತ್ರ, ಶಕುಂತಲಾ,ಪುಷ್ಪ, ಮುಖ್ಯೋಪಾಧ್ಯಾಯರಾದ ಸಂತೋಷ್ ಕುಮಾರ್, ಗ್ರಾಮಸ್ಥರಾದ ನಿಂಗಪ್ಪ, ಮಂಜಪ್ಪ,ಕರಿಬಸಪ್ಪ ಶಾಲೆಯ ಶಿಕ್ಷಕರು ಹಾಗೂ ಶಾಲಾ ಅಕ್ಷರ ದಾಸೋಹ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.