ಬಸವ ಜಯಂತಿ : ಮಕ್ಕಳಿಗೆ ನಾಮಕರಣ

ಬಸವ ಜಯಂತಿ : ಮಕ್ಕಳಿಗೆ ನಾಮಕರಣ

ದಾವಣಗೆರೆ : ಬಸವಣ್ಣನವರ ತತ್ವ, ಆದರ್ಶಗಳನ್ನು ಅರ್ಥ ಮಾಡಿಕೊಂಡು ಬ್ರಿಟೀಷರು ಬಸವಣ್ಣನವರಿಗೆ ಜಗಜ್ಯೋತಿ ಎಂಬ ಬಿರುದನ್ನು ನೀಡಿದ್ದಾರೆ. ಬಸವಣ್ಣ ಕೇವಲ ಕನ್ನಡಿಗರಿಗೆ, ಲಿಂಗಾಯತ, ಕರ್ನಾಟಕ, ಭಾರತಕ್ಕೆ ಮಾತ್ರ ಸೀಮಿತ ವ್ಯಕ್ತಿಯಲ್ಲ. ಬಸವಣ್ಣನವರು ಇಡೀ ವಿಶ್ವಕ್ಕೇ ಸೇರಿದ ಮಹಾತ್ಮರಾಗಿ ಅವರು ವಿಶ್ವದ ಬೆಳಕಾಗಿದ್ದಾರೆ. ಅವರು ನೀಡಿರುವ ಕಾಯಕ, ಸಮಾನತೆ, ದಾಸೋಹ ತತ್ವಗಳನ್ನು ಆಚರಣೆ ಮಾಡುವುದರಿಂದ ಎಲ್ಲರಿಗೂ ಜೊತೆಗೆ ಜಗತ್ತೂ ಕೂಡಾ ಉದ್ಧಾರವಾಗುತ್ತದೆ. ಎಲ್ಲರೂ ಬಸವ ತತ್ವದ ದಾರಿಯಲ್ಲಿ ನಡೆಯೋಣ ಎಂದು ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿಗಳು ಹಾಗೂ ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಹೇಳಿದರು.

ನಗರದ ವಿರಕ್ತಮಠದಲ್ಲಿಂದು ಬಸವ ಜಯಂತಿ ಅಂಗವಾಗಿ ಭಾನುವಾರ ಶ್ರೀ ವಿರಕ್ತಮಠ, ಲಿಂಗಾಯತ (ವೀರಶೈವ)ತರುಣ ಸಂಘದ ಸಹಯೋಗದಲ್ಲಿ ನಡೆದ ಬಸವ ಜಯಂತಿ ಪ್ರಭಾತ್ ಪೇರಿ ಹಾಗೂ ಶ್ರೀ ಗುರು ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ಬಸವಣ್ಣನವರ ಸಪ್ತ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿದಿನ ಆಚರಣೆ ಮಾಡುತ್ತಾ ಹೋದರೆ ವ್ಯಕ್ತಿ, ಲೋಕ ಕಲ್ಯಾಣ ಆಗುತ್ತದೆ. ಭ್ರಷ್ಟಾಚಾರಕ್ಕೆ ಕಡಿವಾಣ ಪೂರ್ಣ ವಿರಾಮ ಬಸವ ತತ್ವದಲ್ಲಿದೆ. ನಾವು ಮಾಡುವ ಕಾಯಕ ಪ್ರಾಮಾಣಿಕವಾಗಿರಬೇಕು. ಇದರಿಂದ ದಾಸೋಹ ಮಾಡಬೇಕು. ಮೂಢನಂಬಿಕೆಗಳಿAದ ದೂರವಾಗಬೇಕಾದರೆ ಬಸವ ತತ್ವದಿಂದ ಮಾತ್ರ ಸಾಧ್ಯ. ಪ್ರಗತಿಪರವಾದ ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಒಳ್ಳೆಯ ದಿನ, ರಾಹುಕಾಲ, ಗುಳಿಕಾಲ ಎಂದು ಕಾಯದೇ ನೀವು ಒಳ್ಳೆಯದು ಮಾಡಲು ಹೊರಟ ಸಮಯವೇ ಒಳ್ಳೆಯ ದಿನ ಸಮಯವಾಗಿರುತ್ತದೆ ಎಂದರು.

ವಿಶ್ವದಲ್ಲಿಯೇ ಮೊಟ್ಟಮೊದಲ ಬಾರಿಗೆ 1913ರಲ್ಲಿ ದಾವಣಗೆರೆಯ ಇದೇ ವಿರಕ್ತಮಠದಲ್ಲಿ ಬಸವ ಜಯಂತಿಯನ್ನು ಆರಂಭಿಸಲಾಯಿತು. ಅಂದಿನ ಮಠಾಧೀಶರಾದ ಜಯದೇವ ಜಗದ್ಗುರುಗಳ ಆಶೀರ್ವಾದದಿಂದ ಇಲ್ಲಿನ ಮಠಾಧೀಶರಾಗಿದ್ದ ಮೃತ್ಯುಂಜಯಪ್ಪ, ಹಾಗೂ ಕರ್ನಾಟಕದ ಗಾಂಧಿ ಎಂದೇ ಹೆಸರಾದ ಹರ್ಡೆಕರ್ ಮಂಜಪ್ಪನವರು ಬಸವ ಜಯಂತಿಯನ್ನು ಆರಂಭಿಸಿದರು ಎಂದರು.

ಅಸಮಾನತೆ ಎನ್ನುವುದು ನಮ್ಮ ದೇಶ ಅಷ್ಟೇ ಅಲ್ಲ ಬೇರೆ ಬೇರೆ ದೇಶಗಳಲ್ಲಿಯೂ ಇದೆ. ಇಂತಹ ಅಸಮಾನತೆಯನ್ನು ಕಿತ್ತು ಹಾಕಿದ ಮಹಾನ್ ಕ್ರಾಂತಿಕಾರ ಪುರುಷ ಎಂದರೆ ಅದು 12ನೇ ಬಸವಣ್ಣನವರು. ಬಸವಣ್ಣ ಬರದೇ ಇದ್ದಿದ್ದರೆ ಇಂದು ಸ್ತಿçà ಕುಲಕ್ಕೆ ಸಮಾನತೆ ಸಿಗುತ್ತಿರಲಿಲ್ಲ, ಎಷ್ಟೋ ದೇವಾಲಯಗಳಲ್ಲಿ ಮಹಿಳೆಯರಿಗೆ ಪ್ರವೇಶ ಇರಲಿಲ್ಲ. ಬಸವಣ್ಣನವರು ಅನುಭವ ಮಂಟಪ ಕಟ್ಟಿ ಅಲ್ಲಿ ಎಲ್ಲ ತಾಯಂದಿರು, ಎಲ್ಲಾ ಜನಾಂಗದವರನ್ನು ಸೇರಿಸಿ ಸರ್ವರೂ ಸಮಾನರು ಎಂಬುದನ್ನು ತೋರಿಸಿದರು. ವರ್ಗರಹಿತ, ಜಾತಿರಹಿತ, ಲಿಂಗಬೇಧ ವೆಂಬ ತಾರತಮ್ಯವನ್ನು ಹೊಡೆದೋಡಿಸಿದವರು ಬಸವಣ್ಣನವರು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಕ್ರಾಂತಿಯ ಜ್ಯೋತಿಯನ್ನು 12ನೇ ಶತಮಾನದಲ್ಲಿ ಬಸವಣ್ಣನವರು ಹಚ್ಚಿದ್ದಾರೆ. ಕ್ರಾಂತಿಯ ಕಿಡಿ ಇಂದಿಗೂ ಉರಿಯುತ್ತಾ ಇದೆ. ಇಂದು ಬಸವ ತತ್ವಗಳನ್ನು ಆಚರಣೆ, ಪ್ರಚಾರ ಮಾಡುತ್ತಾ ಹೋಗುತ್ತಾರೋ ಅವರಿಗೆ ದುಷ್ಟ ಶಕ್ತಿಗಳು ತಡೆಯುತ್ತಿವೆ. ಏನೇ ಬಂದರೂ ಧೈರ್ಯದಿಂದ ಎದುರಿಸಬೇಕು. ಬಸವಣ್ಣನವರನ್ನು ನಂಬಿದವರಿಗೆ ಎಂದಿಗೂ ಸಾವಿಲ್ಲ. ಬಸವಣ್ಣ ಎಂದರೆ ಜಯ.
ಅಕ್ಷಯ ತೃತೀಯ ದಿನದಂದು ಬಸವಣ್ಣ ಹುಟ್ಟಿದ ದಿನ, ಅಕ್ಷಯ ಎಂದರೆ ಕ್ಷಯ ನಾಶ, ಅಕ್ಷಯ ಎಂದರೆ ನಾಶವಾಗದೇ ಇರುವುದು. ಅಕ್ಷಯ ತೃತೀಯ ಎಂದು ಬಂಗಾರ ಖರೀದಿ ಮಾಡಿರಿ ಎಂದು ಟಿವಿಗಳಲ್ಲಿ ಹೇಳುತ್ತಾರೆ. ಬಂಗಾರ ಖರೀದಿ ಮಾಡಿ ಬಳೆ, ಸರ ಮಾಡಿಸಿಕೊಳ್ಳುತ್ತೀರಿ. ಕಳ್ಳರು ಬಂದು ಕಿತ್ತುಕೊಂಡು ಹೋಗುತ್ತಾರೆ. ಬಸವಣ್ಣ ನೀಡಿದ ಕಾಯಕ, ದಾಸೋಹ, ಮಾನವೀಯ ಮೌಲ್ಯಗಳು, ಸಮಾನತೆ ತತ್ವಗಳು ನಿಜವಾದ ಬಂಗಾರ, ಇವು ಎಂದಿಗೂ ನಾಶವಾಗುವುದಿಲ್ಲ, ಇತಿಹಾಸವಾಗಿರುತ್ತಾರೆ ಎಂದರು.
ಚಿತ್ರದುರ್ಗದ ಬಸವ ಮುರುಗೇಂದ್ರ ಸ್ವಾಮೀಜಿ ಮಾತನಾಡಿ, ಕರ್ನಾಟಕದಲ್ಲಿ ಸ್ವಾತಂತ್ರö್ಯದ ನೇತೃತ್ವ ವಹಿಸಿಕೊಂಡವರು ಹರ್ಡೇಕರ್ ಮಂಜಪ್ಪನವರು. 1913ರಲ್ಲಿ ದಾವಣಗೆರೆ ವಿರಕ್ತಮಠದಲ್ಲಿ ಬಸವಾದಿ ಪ್ರಮಥರ ವಚನಗಳು, ತತ್ವಗಳು ಪ್ರತಿ ಮನೆ ಮನ ತಲುಪಬೇಕು ಎಂದು ಎಲ್ಲರಿಗೂ ಇಷ್ಟ ಲಿಂಗ ದೀಕ್ಷೆ ಆಗಬೇಕು. ಎಲ್ಲರೂ ಸೇರಿ ಶಿವಯೋಗ ಮಾಡಬೇಕು ಎಂದು ಇಡೀ ವಿಶ್ವದಲ್ಲಿ ಅದು ದಾವಣಗೆರೆಯ ವಿರಕ್ತಮಠದಲ್ಲಿ ಬಸವ ಜಯಂತಿಯನ್ನು ಆರಂಭಿಸಿದರು. ಬಸವಣ್ಣ ಎಂದರೆ ಕ್ರಾಂತಿ, ಹೋರಾಟ, ಕ್ರಾಂತಿಯ ಕಹಳೆ, ಬಸವಣ್ಣ ಎಂದರೆ ಸಮಾಜ. ಎಲ್ಲಿ ಕ್ರಾಂತಿಯ ಕಹಳೆ ಮೊಳಗುತ್ತದೆಯೋ ಅಲ್ಲಿ ಬಸವಣ್ಣ ನೆಲೆಸಿರುತ್ತಾರೆ ಎಂದರು.

ಬಸವ ಜಯಂತಿ : ಮಕ್ಕಳಿಗೆ ನಾಮಕರಣ
ಈ ಸಂದರ್ಭದಲ್ಲಿ ಶಿವಯೋಗಾಶ್ರಮದ ಸಹ ಕಾರ್ಯದರ್ಶಿ ಎಸ್.ಓಂಕಾರಪ್ಪ, ಲಿಂಗಾಯತ ತರುಣ ಸಂಘದ ಸಂಚಾಲಕ ಕಣಕುಪ್ಪಿ ಮುರುಗೇಶಪ್ಪ, ವಿರಕ್ತಮಠದ
ಹಾಸಬಾವಿ ಕರಿಬಸಪ್ಪ, ವೀರೇಂದ್ರ ಟಿ.ಎಂ., ಚಿಗಟೇರಿ ಜಯದೇವ, ಬಾಳೆಕಾಯಿ ಮುರುಗೇಶ, ಕುಂಟೋಜಿ ಚನ್ನಪ್ಪ, ಬೆಳ್ಳೂಡಿ ಮಂಜುನಾಥ, ಚನ್ನಬಸವ ಶೀಲವಂತ್, ಕೆ.ಸಿ.ಉಮೇಶ, ಶರಣಬಸವ, ಕುಮಾರ ಸ್ವಾಮಿ, ಇಂದೂಧರ ನಿಶಾನಿಮಠ, ಮಹಾಂತೇಶ, ನಿರಂಜನ ನಿಶಾನಿಮಠ, ಮಲ್ಲಿಕಾರ್ಜುನ, ಕೀರ್ತಿ, ಮಹದೇವಮ್ಮ, ವೀಣಾ ಮಂಜುನಾಥ, ಚೇತನ ಶಿವಕುಮಾರ, ವನಜಾ ಮಹಾಲಿಂಗಯ್ಯ, ಸುಜಾತ ಸೇರಿದಂತೆ ಅನೇಕ ಶ್ರೀಮಠದ ಭಕ್ತರು, ಬಸವ ಕಲಾಲೋಕದವರು ಪಾಲ್ಗೊಂಡಿದ್ದರು. ಜಾನಪದ ಕಲಾವಿದ ಗಂಜಿಗಟ್ಟಿ ಕೃಷ್ಣಮೂರ್ತಿಯವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು.

ಬಸವ ಜಯಂತಿ ಅಂಗವಾಗಿ 7 ದಿನಗಳ ಕಾಲ ಬಸವ ಪ್ರಭಾತ್ ಪೇರಿಯನ್ನು ಶ್ರೀಮಠದಿಂದ ನಗರದ ಪ್ರಮುಖ ಬೀದಿಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಬಸವ ಜಯಂತಿಯ ಇಂದು ಬಸವಣ್ಣನವರ ಮೂರ್ತಿಯೊಂದಿಗೆ ಪ್ರಭಾತ್ ಪೇರಿ ನಡೆಯತು. ಬಸವಣ್ಣನವರ ವಚನಗಳನ್ನು ಹಾಡುತ್ತಾ ಬಸವಾದಿ ಶರಣರ ಸಂದೇಶಗಳನ್ನು ಪ್ರಭಾತ್ ಪೇರಿ ಮೂಲಕ ಮನೆ ಮನಗಳಿಗೆ ತಲುಪಿಸಲಾಯಿತು.
ಇಂದು ವಿಶೇಷವಾಗಿ ಚಿಕ್ಕ ಮಕ್ಕಳಿಗೆ ಬಸವಣ್ಣ, ಅಕ್ಕಮಹಾದೇವಿ, ಚನ್ನಬಸವಣ್ಣ, ಅಲ್ಲಮಪ್ರಭು, ಜಯದೇವ ಈ ರೀತಿಯಾಗಿ ಮಕ್ಕಳಿಗೆ ನಾಮಕರಣ ಮಾಡುವ ಮೂಲಕ ಬಸವ ಜಯಂತಿ ಆಚರಣೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!