ಭಗವದ್ಗೀತೆ ಜೊತೆಗೆ ಬಸವಣ್ಣನ ವಚನಗಳು ಪಠ್ಯಪುಸ್ತಕದಲ್ಲಿ ‌ಬರಲಿ : ಬಾಡದ ಆನಂದರಾಜ್

ದಾವಣಗೆರೆ : ರಾಜ್ಯ ಸರ್ಕಾರ ಶಿಕ್ಷಣ ಕೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುತ್ತಿರುವುದು ಮತ್ತು ಭಗವದ್ಗೀತೆಯ ಜೊತೆಗೆ ವಿಶ್ವಗುರು ಬಸವಣ್ಣನವರ ವಚನಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಲಿ ಎಂದು ದಾವಣಗೆರೆ ಜಿಲ್ಲಾ ಶೋಷಿತ ವರ್ಗಗಳ ಒಕ್ಕೂಟದ ಬಾಡದ ಆನಂದರಾಜ್ ಒತ್ತಾಯಿಸಿದ್ದಾರೆ.  ಭಗವದ್ಗೀತೆಯ ಸಾರಾಂಶ ಜೀವನಕ್ಕೆ ನೀತಿ ಪಾಠ ಹೇಳಿಕೊಟ್ಟಿದ್ದರೆ. ಹನ್ನೆರಡನೆಯ ಶತಮಾನದಲ್ಲಿ ಅಪ್ಪಟ ಕನ್ನಡದಲ್ಲಿ ಸರಳವಾಗಿ ಮತ್ತು ಸಮಾಜದಲ್ಲಿನ ಅಜ್ಙಾನ . ಅಸ್ಪೃಶ್ಯತೆ. ಮೂಡನಂಬಿಕೆ.ಅನಿಷ್ಟ ಪದ್ದತಿಗಳ ವಿರುದ್ದ ಸಮರ ಸಾರಿದ ನಮ್ಮ ನಾಡಿನ ವಿಶ್ವಗುರು ಬಸವಣ್ಣನವರ ವಚನಗಳನ್ನ ಪಠ್ಯಪುಸ್ತಕಗಳಲ್ಲಿ ಅಳವಡಿಸುವುದರಿಂದ ಸಮಾಜದ ವಿದ್ಯಾರ್ಥಿಗಳಲ್ಲಿ ಸಮಗ್ರ ಸಾಮಾಜಿಕ ಕ್ರಾಂತಿ ಕಾಣಬಹುದು.ಅದೇರೀತಿ ವಚನಗಳನ್ನ ಸರಳವಾಗಿ ಅರ್ಥೈಸಿಕೊಳ್ಳಬಹುದು. ಪಠ್ಯ ಪುಸ್ತಕಗಳಲ್ಲಿ ಜೀವನದ ಸಾರಂಶ.ದೇಶ ರಕ್ಷಿಸುವ ಕೆಲಸ.ಕೃಷಿಗೆ ಸಂಭಂದಪಟ್ಟ ಮಾಹಿತಿಗಳು.ಸಮಾಜದಲ್ಲಿ ಸಾಮರಸ್ಯ ಮೂಡಿಸುವಂತ ವಿಚಾರಗಳು ಹಾಗೂ ಮಕ್ಕಳಲ್ಲಿ ಕಾಯಕವೇ ಕೈಲಾಸ ಮತ್ತು ಅರಿವೇ ಗುರು ಎಂಬ ಮೂಲ ಮಂತ್ರ ಮಕ್ಕಳಲ್ಲಿ ಈ ವಿಷಯಗಳು ಮುಖ್ಯವಾಹಿನಿಗೆ ಬರಲಿ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹಾಗೂ ಶಿಕ್ಷಣ ಸಚಿವ ನಾಗೇಶ್ ರಲ್ಲಿ ಬಾಡದ ಆನಂದರಾಜ್ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!