ಸಾಮಾನ್ಯ ತಿಳುವಳಿಕೆ, ಜ್ಞಾನಕ್ಕಿಂತ ಹೆಚ್ಚು : ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆಯ ರಿಜೀಸ್ಟ್ರಾರ್ ಡಾ|| ಎಸ್. ಬಸವರಾಜಪ್ಪ

ದಾವಣಗೆರೆ – ಆದುನಿಕ ಜಗತ್ತಿಗೆ ಮತ್ತು ಸ್ಪಾರ್ಧಾತ್ಮಕ ಪರೀಕ್ಷೆ ಬರೆಯಲು ಜ್ಞಾನ ವಿಜ್ಞಾನ ಬೇಕೆಬೇಕು. ಅದರ ಜೋತೆ ಸಾಮಾನ್ಯ ತಿಳುವಳಿಕೆ ಹಾಗೂ ಬುದ್ದಿವಂತಿಕೆ ಕೂಡಾ ಇದ್ದರೆ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವೆಂದು ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ರಜೀಸ್ಟ್ರಾರ್ ಡಾ|| ಎಸ್. ಬಸವರಾಜಪ್ಪ ತಿಳಿಸಿದರು.
ಅಖಿಲ ಭಾರತಿಯ ತಾಂತ್ರಿಕ ಶಿಕ್ಷಣ ಪರಿಷತ್, ನವದೆಹಲಿ, ಮತ್ತು ವಿಶ್ವವಿದ್ಯಾಲಯ ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ, ಯಾಂತ್ರಿಕ ವಿಭಾಗದ ಸಂಯುಕ್ತ ಆಶ್ರಯದಲ್ಲಿ “ಎಂಪವರಿಂಗ್ ಟಿಚಿಂಗ್ ಲರ್ನಿಂಗ್ ಸ್ಕೀಲ್ಸ್ ಯೂಸಿಂಗ್ ಮಾರ್ಡನ್ ಪಿಡಗೊಗಿ ಟೂಲ್ಸ್ ಇನ್ ಟೆಕ್ನೊಲಾಜಿ ಎಜುಕೇಷನ್” ಎಂಬ ವಿಷಯ ಕುರಿತು ಎರಡು ವಾರ ಪ್ರಾಧ್ಯಪಕರ ಅಭಿವೃದ್ಧಿ ಕಾರ್ಯಕ್ರಮದ ಉದ್ಗಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಧನಾತ್ಮಕ ಚಿಂತನೆ, ಸೃಜನಶೀಲ ವ್ಯಕ್ತಿತ್ವ, ವಾಕ್ ಸಾಮಥ್ರ್ಯ, ಸಮಸ್ಯೆ ಪರಿಹರಿಸುವ ತಂತ್ರಗಾರಿಕೆ, ಮುಂತಾದ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಮಾದರಿ ಶಿಕ್ಷಕರಾಗಲು ಪ್ರತಿನಿದಿಗಳಿಗೆ ಡಾ|| ಎಸ್. ಬಸವರಾಜಪ್ಪ ಕರೆ ನೀಡಿದರು.
ಭೋದನೆ ಮತ್ತು ಕಲಿಕೆ ಹಲವು ಚಂಚಲತೆಗಳಿಂದ ಕೂಡಿರುವ ಪ್ರಕ್ರಿಯೆಗಳು. ಕಲಿಯುವವರ ಕಲಿಕೆಯ ಅನುಭವಗಳ ವ್ಯಕ್ತಿಯನ್ನು ವೃಧ್ದಿಸುವಂತಹ ಗುರಿಯನ್ನು ತಲುಪಲು ಶ್ರಮಿಸುವಾಗ ಮತ್ತು ಹೊಸ ಜ್ಞಾನವನ್ನು ವರ್ತನೆ ಹಾಗು ಕೌಶಲ್ಯವನ್ನು ಆಯೋಜಿಸುವಾಗ ಈ ಭೇಧಗಳು ಪರಸ್ಪರ ವರ್ತಿಸುತ್ತವೆ. ಕಳೆದ ರಾಮಾಯಣ ಹಾಗೂ ಮಹಾಭಾರತ ಶತಮಾನಗಳಿಂದಲೂ ಕಲಿಕೆಯ ಮೇಲೆ ಅನೇಕ ದೃಷ್ಠಿವೈಶಲ್ಯಗಳು ಮೂಡಿ ಬಂದಿವೆ ಎಂದು ಸ್ಥಳಿಯ ಬಾಪೂಜಿ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನೊಲಜಿ ಕಾಲೇಜಿನ ಪ್ರಚಾರ್ಯರಾದ ಡಾ|| ಹೆಚ್.ಬಿ. ಅರವಿಂದ ರವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರಿ ಪ್ರಚಾರ್ಯರಾದ ಡಾ|| ಈರಮ್ಮ ಹೆಚ್. ವಹಿಸಿ ಮಾತನಾಡುತ್ತ ಬೋಧನೆ ತತ್ವ ಕಲಿಸುವ ಕಲೆ ಮತ್ತು ಸೈದ್ಯಂತಿಕ ಪರಿಕಲ್ಪನೆಯನ್ನು ಪ್ರತಿಯೊಬ್ಬ ಶಿಕ್ಷಕರು ಪಾಲಿಸಬೇಕು ಎಂದು ನುಡಿದರು.
ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಡಾ|| ಹೆಚ್.ಆರ್. ಪ್ರಭಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ದೇಶದ ನಾನಾ ಇಂಜಿನಿಯರಿಂಗ್ ಕಾಲೇಜಿನ 50ಕ್ಕು ಹೆಚ್ಚು ಪ್ರಾಧ್ಯಪಕರುಗಳು ಪಾಲ್ಗೊಂಡಿದ್ದರು.
ಶ್ರೀಮತಿ ರೇಖಾ ಪದಕಿ ಪ್ರಾರ್ಥಿಸಿದರು, ಡಾ. ಎಸ್. ಮಂಜಪ್ಪ, ಪ್ರಾದ್ಯಾಪಕರು ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷರು, ಸ್ವಾಗತಿಸಿದರು. ಸಹ ಪ್ರಾಧ್ಯಪಕರಾದ ಡಾ|| ಎಂ. ಪ್ರಸನ್ನ ಕುಮಾರ್, ಸಹಾಯಕ ಪ್ರ್ರಾಧ್ಯಾಪಕರುಗಳಾದ ಡಾ|| ಕೆ.ಜಿ. ಸತಿಶ್, ಮತ್ತು ಅಣ್ಣಪ್ಪ ಎ.ಆರ್. ಇವರುಗಳು ಅತಿಥಿಗಳನ್ನು ಪರಿಚಿಯಿಸಿದರು, ಯಾಂತ್ರಿಕ ವಿಭಾಗದ ಮುಖ್ಯಸ್ಥರಾದ ಡಾ|| ಈರಪ್ಪ ಸೋಗಲದ ಕಾರ್ಯಕ್ರಮ ನೀರುಪಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡಾ|| ಶೇಖರಪ್ಪ ಬಿ. ಮಲ್ಲೂರ ಕಾರ್ಯಕ್ರಮದ ಉದ್ದೇಶದ ಕುರಿತು ಮಾತನಾಡಿದರು. ಕೊನೆಯಲ್ಲಿ ಸಯಾಯಕ ಪ್ರಾಧ್ಯಪಕರಾದ ಎಂ.ಹೆಚ್. ದಿವಾಕರ್ ಇವರು ವಂದಿಸಿದರು.. ದಾವಣಗೆರೆಯ ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜನಲ್ಲಿ ಜರುಗಿದ ಎರಡು ವಾರ ಕಾರ್ಯಗಾರದ ಸಮಾರಂಭದಲ್ಲಿ ಡಾ|| ಎಸ್. ಬಸವರಾಜಪ್ಪ, ಡಾ|| ಹೆಚ್.ಬಿ. ಅರವಿಂದ, ಡಾ|| ಎಸ್.ಬಿ. ಮಲ್ಲೂರ, ಡಾ|| ಈರಪ್ಪ ಸೊಗಲದ, ಡಾ|| ಎಸ್. ಮಂಜಪ್ಪ, ಡಾ|| ಕೆ.ಜಿ. ಸತೀಶ್, ಡಾ|| ಪ್ರಸನ್ನ ಕುಮಾರ್, ಅಣ್ಣಪ್ಪ ಎ.ಆರ್., ಹೆಚ್.ಆರ್. ಪ್ರಭಕಾರ್ ಮುಂತಾದವರು ಚಿತ್ರದಲ್ಲಿ ಇದ್ದಾರೆ.

Leave a Reply

Your email address will not be published. Required fields are marked *

error: Content is protected !!