ಮದುವೆಗೂ ಮುಂಚೆ ಚಿನ್ನ ಎನ್ನುತ್ತಿದ್ದವ ಈಗ ಚಿನ್ನ ಕೊಡಲು ಪಟ್ಟು ಹಿಡಿದಿದ್ದಾನೆ ಭೂಪ! ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ ಯುವತಿ

ಶಿವಮೊಗ್ಗ: ಮದುವೆಗೂ ಮುಂಚೆ ಚಿನ್ನ, ಬೆಳ್ಳಿ, ಬಂಗಾರ ಎಂದು ಪುಸಲಾಯಿಸಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ಭೂಪನೊಬ್ಬ ಇದೀಗ ಚಿನ್ನ, ಬೆಳ್ಳಿ, ಬಂಗಾರ ತಂದುಕೊಡುವಂತೆ ಪಟ್ಟುಹಿಡಿದಿದ್ದಾನೆ. ಇದರಿಂದ ಬೇಸತ್ತ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಅಜ್ಜಿ ಮನೆಗೆ ಬಂದಾಗ ಹುಡುಗ-ಹುಡುಗಿಗೆ ಆಕಸ್ಮಿಕವಾಗಿ ಪರಿಚಯ ಆಯಿತು, ಸ್ನೇಹ ಬೆಳೆದು ಅವಳ ಮನಸ್ಸಿಗೆ ಹತ್ತಿರವಾದ, ನಂತರ ನೀನೇ ನನ್ನ ಸರ್ವಸ್ವ, ಬಾಳ ಬಂಗಾರ ಎಂದು ದಾವಣಗೆರೆ ರಿಜಿಸ್ಟಾರ್ ಕಚೇರಿಯಲ್ಲಿ ಮದುವೆಯಾದ. ಸ್ವಲ್ಪ ದಿನ ಬಿಟ್ಟು ನಿನ್ನನ್ನು ಬೆಂಗಳೂರಿನ ನಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೋದ. ಆದರೀಗ ತನ್ನ ವರಸೆ ಬದಲಿಸಿದ್ದಾನೆ. ಗಂಡನ ಕಾಟ ಸಹಿಸಲಾಗದೆ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ದಾವಣಗೆರೆ ತಾಲೂಕಿನ ಕಾರಿಗನೂರು ಗ್ರಾಮದ ಚೇತನ್ ಎಂಬುವರು ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಭದ್ರಾವತಿ ತಾಲೂಕಿನ ಸೀತಾರಾಮಪುರ ಗ್ರಾಮಕ್ಕೆ ಅಜ್ಜಿ ಮನೆಗೆ ಬಂದಾಗ ಅಂಜು ಪರಿಚಯ ಆಗಿತ್ತು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ 2020ರಲ್ಲಿ ದಾವಣಗೆರೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಪ್ತಪದಿ ತುಳಿದು ನೋಂದಣಿ ಮಾಡಿಸಿಕೊಂಡಿದ್ದರು. ಈ ವಿಷಯವನ್ನು ಚೇತನ್ ತನ್ನ ಪಾಲಕರಿಂದ ಮುಚ್ಚಿಟ್ಟಿದ್ದ.

ಲವ್ ಮಾಡಿ ಗುಟ್ಟಾಗಿ ಮದುವೆಯಾದ ಚೇತನ್, ಬೆಂಗಳೂರಿಗೆ ಹೋಗಿ ಸ್ವಲ್ಪ ದಿನದ ಬಳಿಕ ಕರೆಸಿಕೊಳ್ಳುವುದಾಗಿ ಹೇಳಿದ್ದಂತೆ. ಬೆಣ್ಣೆಯಂತ ಚೇತನ್ ಮಾತಿಗೆ ಅಂಜು ಕರಗಿ ಹೋಗಿದ್ದಳು. ಇನ್ನೇನು ಸ್ವಲ್ಪ ದಿನಗಳಲ್ಲಿ ಬೆಂಗಳೂರಿಗೆ ತೆರಳಿ ಪ್ರೀತಿಸಿ ಕೈ ಹಿಡಿದ ಚೇತನ್‌ನೊಂದಿಗೆ ಬದುಕು ಕಟ್ಟಿಕೊಳ್ಳುತ್ತೇನೆ ಎಂದು ಚಾತಕಪಕ್ಷಿಯಂತೆ ಅಂಜು ಕಾಯುತ್ತಿದ್ದಳು. ಆದರೀಗ ತನ್ನೊಂದಿಗೆ ಕರೆದೊಯ್ಯಲು ಚಿನ್ನ ಬೇಕೇಂದು ಬೇಡಿಕೆ ಇಟ್ಟಿದ್ದಾನೆ. ಮದುವೆ ಮುಂಚೆ ನೀನೇ ನನ್ನ ಚಿನ್ನ ಎನ್ನುತ್ತಿದ್ದ ಚೇತನ್, ಈಗ ಅಂಜುಗೆ ಪದೇಪದೆ ಫೋನ್ ಮಾಡಿ ಚಿನ್ನ ಮತ್ತು ದುಡ್ಡು ತೆಗೆದುಕೊಂಡು ಬಾ ಎಂದು ಬೆದರಿಕೆ ಹಾಕುತ್ತಿದ್ದಾನಂತೆ. ಮಗ ಗುಟ್ಟಾಗಿ ಕೈ ಹಿಡಿದವಳನ್ನು ಅಧಿಕೃತವಾಗಿ ಸೊಸೆ ಎಂದು ಒಪ್ಪಿಕೊಳ್ಳಲು ಆತನ ಪಾಲಕರೂ 2 ಲಕ್ಷ ನಗದು, 100 ಗ್ರಾಂ ಬಂಗಾರ ಕೊಟ್ಟರೆ ಮಾತ್ರ ನಿಮ್ಮ ಮಗಳು ನಮ್ಮ ಮನೆಯ ಸೊಸೆಯಾಗಿ ಇರ್ತಾಳೆ ಎಂದು ಯುವತಿ ಪಾಲಕರಿಗೆ ತಾಕೀತು ಮಾಡಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!