ಬೆಂಗಳೂರು ಪೊಲೀಸ್ ಕಮಿಷನರ್ ಯಾರಾಗ್ತಾರೆ ಗೊತ್ತಿಲ್ಲ.! ಗೃಹ ಮಂತ್ರಿ ಆರಗ ಜ್ಞಾನೇಂದ್ರ
ದಾವಣಗೆರೆ: ಮಾದಕ ವಸ್ತುಗಳ ಮತ್ತು ಅತ್ಯಾಚಾರ ಪ್ರಕರಣಗಳು ಪೊಲೀಸ್ ಜಗತ್ತಿಗೆ ಬಹುದೊಡ್ಡ ಸವಾಲಾಗಿದ್ದು, ಈಗಾಗಲೇ ಇವುಗಳ ತಹಬದಿಗೆ ಪೊಲೀಸ್ ಇಲಾಖೆ ಶ್ರಮವಹಿಸುತ್ತಿದೆ. ಮತ್ತಷ್ಟು ಬಿಗಿ ಕ್ರಮಗಳ ಮೂಲಕ ನಿಗ್ರಹಿಸಲು ಸೂಕ್ತ ನಿರ್ದೇಶನ ನೀಡಲಾಗಿರುವುದಾಗಿ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳೊಳಗಾಗಿ ಪೊಲೀಸರು ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ. ಈಗೇನಿದ್ದರೂ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕಿದೆ ಎಂದರು.
ಬೆಂಗಳೂರು ಪೊಲೀಸ್ ಕಮಿಷನರ್ ಯಾರಾಗುತ್ತಾರೆ ಇನ್ನೂ ಗೊತ್ತಿಲ್ಲ. ಅವರ ಸೀನಿಯರಿಟಿ ಪ್ರಕಾರ ಅದು ನಿರ್ಧಾರವಾಗಲಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.