ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಗಳಿಗೆಗೆ ಪಿತೃ ವಿಯೋಗ
ದಾವಣಗೆರೆ: ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರ ಪೂರ್ವಾಶ್ರಮದ ತಂದೆ ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ. ಅನಾರೋಗ್ಯದಿಂದ ಬಳಲುತ್ತಿದ್ದರು. ತಂದೆ ದುಂಡಪ್ಪ ಅದೃಶ್ಯಪ್ಪ ಗೌರಗೌಡ (82) ಇಂದು ಮಹಾರಾಷ್ಟ್ರ ಮಿರಜ್ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದ ಕೃಷಿ ಕುಟುಂಬದ ದುಂಡಪ್ಪ ಗೌರಗೌಡ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಪತ್ನಿ ಹಾಗೂ ವಚನಾನಂದ ಸ್ವಾಮೀಜಿ ಸೇರಿ ಇಬ್ಬರು ಪುತ್ರರು, ಅಪಾರ ಬಂಧುಗಳನ್ನ ಅಗಲಿದ್ದಾರೆ ದುಂಡಪ್ಪ ಗೌರಗೌಡ.
ಮೃತರ ನಿಧನಕ್ಕೆ ಹರಿಹರದ ಪಂಚಮಸಾಲಿ ಗುರುಪೀಠದ ಪ್ರಧಾನ ಧರ್ಮದರ್ಶಿಗಳಾದ ಬಿಸಿ ಉಮಾ ಪತಿ ಸೇರಿದಂತೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಸ್ವ ಗ್ರಾಮವಾದ ಅಥಣಿ ತಾಲೂಕಿನ ತಾಂಶಿಸಿ ಗ್ರಾಮಸಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ಮಾಹಿತಿ ನೀಡಿದ್ದಾರೆ.