ಬೆಂಗಳೂರು: ಬೆಸ್ಕಾಂ ವಿದ್ಯುತ್ ಕಂಬದಿಂದ bescom ಅನಧಿಕೃತವಾಗಿ ವಿದ್ಯುತ್ ಪಡೆದ ಹಿನ್ನಲೆಯಲ್ಲಿ ಬೆಸ್ಕಾಂ ವಿಚಕ್ಷಣದಳವು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಮಂಗಳವಾರ ದೂರು ದಾಖಲಿಸಿಕೊಂಡಿದೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಜೆ.ಪಿ.ನಗರದಲ್ಲಿರುವ ಮನೆಗೆ ದೀಪಾವಳಿ ವಿದ್ಯುತ್ ಅಲಂಕಾರ ಮಾಡಲು ಬೆಸ್ಕಾಂ ವಿದ್ಯುತ್ ಕಂಬದಿಂದ ವಿದ್ಯುತ್ ಅನ್ನು ಅನಧಿಕೃತವಾಗಿ ತಗೆದುಕೊಂಡಿದ್ದಾರೆ ಎಂದು ಟಿವಿ ಮಾಧ್ಯಮದಲ್ಲಿ ಪ್ರಸಾರವಾದ ವಿಡಿಯೋ ತುಣುಕಿನ ಆಧಾರದ ಮೇಲೆ ಜೆಪಿ ನಗರದ ಬೆಸ್ಕಾಂ ಅಧಿಕಾರಿಗಳು ವಿಚಕ್ಷಣ ದಳಕ್ಕೆ ದೂರು ನೀಡಿರುವ ಹಿನ್ನೆಲೆಯಲ್ಲಿ ವಿಚಕ್ಷಣ ದಳದ ಅಧಿಕಾರಿಗಳು ಭಾರತೀಯ ವಿದ್ಯುತ್ ಕಾಯ್ದೆಯಡಿಯಲ್ಲಿ ವಿದ್ಯುತ್ ಕಳ್ಳತನಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಮಹಿಳೆ ಕಂಕುಳಿನ ಕೂದಲಿನಿಂದ ಗಳಿಸಿದ್ದು ಬರೋಬ್ಬರಿ 5 ಕೋಟಿ!
ನಿನ್ನೆ ಸಾಮಾಜಿಕ ಜಾಲತಾಣ ಹಾಗೂ ಕೆಲವು ಟಿವಿ ಮಾಧ್ಯಮದಲ್ಲಿ ಈ ಕುರಿತು ವಿಡಿಯೋ ತುಣುಕು ಪ್ರಸಾರವಾದ ತಕ್ಷಣವೇ ಬೆಸ್ಕಾಂ ಅಧಿಕಾರಿಗಳು ಹೆಚ್.ಡಿ. ಕುಮಾರಸ್ವಾಮಿ ಅವರ ಮನೆಯಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇಂದು ವಿಚಕ್ಷಣ ದಳಕ್ಕೆ ದೂರು ನೀಡಿದರು.
