ಜಿಶಾನ್‌ಗೆ ಬೆಸ್ಟ್ ಡೆಡ್ ಲಿಫ್ಟರ್ ಪ್ರಶಸ್ತಿ

ದಾವಣಗೆರೆ: ಈಚೆಗೆ ನಗರದ ರಂಗಮಹಲ್‌ನಲ್ಲಿ ನಡೆದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಶ್ರೀ ಬೀರೇಶ್ವರ ವ್ಯಾಯಾಮ ಶಾಲೆಯ ಕ್ರೀಡಾಪಟು ಜಿಶಾನ್ ಜ್ಯೂನಿಯರ್ ೫೯ಕೆ.ಜಿ. ವಿಭಾಗದಲ್ಲಿ ೧೬೫ ಕೆ.ಜಿ ಭಾರವನ್ನು ಎತ್ತುವುದರ ಮೂಲಕ ಚಿನ್ನದ ಪದಕ ಹಾಗೂ ೨೦೨೨ ರ ಬೆಸ್ಟ್ ಡೆಡ್ ಲಿಫ್ಟರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಮಾಸ್ಟರ್-೧, ೯೦ಕೆ.ಜಿ. ವಿಭಾಗದಲ್ಲಿ ಸೈಯದ್ ಖಾಸೀಮ್ ೨ ಚಿನ್ನದ ಪದಕ, ಮಾಸ್ಟರ್ -೨ ೯೦ ಕೆ.ಜಿ ವಿಭಾಗದಲ್ಲಿ ಅಕ್ರಂ ಬಾಷ ಇವರಿಗೆ ೨ ಚಿನ್ನದ ಪದಕ, ಮಾಸ್ಟರ್ -೨, ೮೨ಕೆ.ಜಿ. ವಿಭಾಗದಲ್ಲಿ ಸುಂದರ್‌ರಾವ್ ಕೆ.ಜಿ. ೧ ಚಿನ್ನ ಹಾಗೂ ೧ ಕಂಚಿನ ಪದಕ ಮತ್ತು ಜೂನಿಯರ್ ೯೦ಕೆ.ಜಿ. ವಿಭಾಗದಲ್ಲಿ ಶಾಹಿದ್ ಖಾನ್ ೨ ಕಂಚಿನ ಪದಕ ಪಡೆದಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!