ಲೋಕಲ್ ಸುದ್ದಿ

ಅಭ್ಯರ್ಥಿಗಳ ಪರವಾಗಿ ಬಾಜಿ ಜೋರು.! ತೋಟಗಳನ್ನೇ ಪಣಕ್ಕಿಡುತ್ತಿರುವ ದಾವಣಗೆರೆ ಜನ

ಅಭ್ಯರ್ಥಿಗಳ ಪರವಾಗಿ ಬಾಜಿ ಜೋರು.! ತೋಟಗಳನ್ನೇ ಪಣಕ್ಕಿಡುತ್ತಿರುವ ದಾವಣಗೆರೆ ಜನ

ದಾವಣಗೆರೆ: ವಿಧಾನಸಭಾ ಚುನಾವಣಾಗೆ ಮತದಾನ ಮುಗಿದು ಇನ್ನೇನು ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಇತ್ತ ಬಾಜಿ ಕಟ್ಟುವ ಪ್ರಕ್ರಿಯೆಗಳು ಜೋರಾಗಿ ನಡೆಯುತ್ತಿವೆ.

ಚನ್ನಗಿರಿ ತಾಲ್ಲೂಕಿನಲ್ಲಿ ಎಕರೆ ಗಟ್ಟಲೆ ತೋಟವನ್ನೇ ಪಣಕ್ಕಿಡಲಾರಂಭಿಸಿದ್ದಾರೆ. ತಾವರಕೆರೆ ಗ್ರಾಮದ ಯುವಕನೊಬ್ಬ ಚನ್ನಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಗಂಗಾ ಬಸವರಾಜು ಗೆದ್ದೇ ಗೆಲ್ಲುತ್ತಾರೆ. ನಾನು ಕೂಲಿ ಮಾಡಿದ ಹತ್ತು ಸಾವಿರ ರೂಪಾಯಿ ಬಾಜಿ ಕಟ್ಟಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ. ಮತ್ತೊಬ್ಬ ಯುವಕ ತನ್ನ ಎರಡು ಎಕರೆ ತೋಟವನ್ನು ಜೂಜು ಕಟ್ಟಲು ತಯಾರಿದ್ದೇನೆ. ಈ ಬಾರಿ ಶಿವಗಂಗಾ ಬಸವರಾಜು ಅವರೇ ಗೆಲ್ಲಲಿದ್ದಾರೆ. ನನ್ನ ವಿರುದ್ಧ ಬಾಜಿ ಕಟ್ಟಲು ಯಾರಾದರೂ ಬರಲು ತಯಾರಿದ್ದರೆ ಬರಲಿ ಎಂದಿದ್ದಾರೆ.

ಮತ್ತೊಬ್ಬ ಯುವಕ ಚಾನಲ್ ಪಕ್ಕದಲ್ಲಿಯೇ ಇರುವ, ನೀರು ಸಂಪದ್ಭರಿತವಾಗಿರುವ ಎರಡು ಎಕರೆ ತೋಟವನ್ನು ಪಣಕ್ಕಿಟ್ಟಿದ್ದು, ಇವರೂ ಸಹ ಶಿವಗಂಗಾ ಬಸವರಾಜ್ ಅವರ ಪರವಾಗಿಯೇ ಬಾಜಿ ಕಟ್ಟಲಿದ್ದಾರೆ.

ಹೊನ್ನಾಳಿಯ ಚಿಕ್ಕ ಗೋಣಿಗೆರೆಯಲ್ಲಿ  ಹೆಬ್ಬಾರ್ ನಾಗಣ್ಣ ಎನ್ನುವವರು ತಮ್ಮ ಎರಡು ಎಕರೆ ತೋಟವನ್ನು ಜೂಜು ಕಟ್ಟುವುದಾಗಿ ಹಲಗೆ ಬಾರಿಸಿ ಊರು ತುಂಬಾ ಸಾರಿಸಿದ್ದಾರೆ. ಈ ಬಾರಿ ಹೊನ್ನಾಳಿ ಕಾಂಗ್ರೆಸ್ ಅಭ್ಯರ್ಥಿ ಶಾಂತನಗೌಡ್ರು ಗೆಲ್ಲಲಿದ್ದಾರೆ. ನನ್ನ ವಿರುದ್ಧ ಜೂಜು ಕಟ್ಟುವವರು ಗ್ರಾಮದ ಆಂಜನೇಯ ಗುಡಿ ಬಳಿ ಬರಲಿ ಎಂದು ಸಾರಿಸಿದ್ದಾರೆ.

 

Click to comment

Leave a Reply

Your email address will not be published. Required fields are marked *

Most Popular

To Top