SUCI(C) ಪಕ್ಷದಿಂದ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಭಾರತಿ. ಕೆ ನಾಮಪತ್ರ ಸಲ್ಲಿಕೆ.

SUCI(C) ಪಕ್ಷದಿಂದ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಭಾರತಿ. ಕೆ ನಾಮಪತ್ರ ಸಲ್ಲಿಕೆ.

ದಾವಣಗೆರೆ: ದಿನಾಂಕ 13-04-2023 ರಂದು SUCI Communist ಪಕ್ಷದಿಂದ ಸ್ಪರ್ದಿಸುತ್ತಿರುವ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಕಾಮ್ರೇಡ್ ಭಾರತಿ ಕೆ. ರವರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಿದರು.
ಈ ನಾಮಪತ್ರ ಸಲ್ಲಿಕೆಯ ಮುಂಚೆ ಭಾರತ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯಾದ ಕ್ರಾಂತಿಕಾರಿ ಭಗತ್ ಸಿಂಗ್ ರವರ ಪುತ್ತಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ SUCI(C) ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ ರವರು ಮಾತನಾಡಿ ‘ಭಗತ್ ಸಿಂಗ್ ರವರು ಸ್ವಾತಂತ್ರ್ಯ ಹೋರಾಟದಲ್ಲೇ ಹೇಳಿದ್ದರು ಭಾರತದಲ್ಲಿ ಸಮಾಜವಾದಿ ಕ್ರಾಂತಿಯಾಗಬೇಕೆಂದು ಹಾಗು ಮಾನವನಿಂದ ಮಾನವನ ಮೇಲೆ ನಡೆಯುತ್ತಿರುವ ಶೋಷಣೆ ನಿಲ್ಲಬೇಕಾದರೆ ಬಂಡವಾಳಶಾಹಿ ವರ್ಗದ ವಿರುದ್ಧ ಕಾರ್ಮಿಕ ವರ್ಗದ ಒಗ್ಗಟ್ಟಿನ ಹೋರಾಟವೊಂದೇ ಮಾರ್ಗ ಎಂದರು .

SUCI(C) ಪಕ್ಷದಿಂದ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಭಾರತಿ. ಕೆ ನಾಮಪತ್ರ ಸಲ್ಲಿಕೆ.
ಅವರ ಆದರ್ಶದಂತೆಯೇ ನಮ್ಮ SUCI(ಕಮ್ಯುನಿಸ್ಟ್) ಪಕ್ಷವೂ ಕೂಡ ಬಂಡವಾಳಶಾಹಿ ವರ್ಗದ ವಿರುದ್ಧ ಹಾಗು ಈ ವರ್ಗ ಸೃಷ್ಟಿಸಿರುವ ಬೆಲೆ ಏರಿಕೆ, ಅಸಮಾನತೆ, ಅಶ್ಲೀಲತೆ, ನಿರುದ್ಯೋಗ, ಬಡತನ ಇಂತಹ ಜ್ವಲಂತ ಸಮಸ್ಯೆಗಳ ವಿರುದ್ಧ ಸತತ ರಾಜೀರಹಿತ ಹೋರಾಟ ಕಟ್ಟುತ್ತಾ ಬಂದಿದೆ. ಇಂತಹ ರಾಜೀರಹಿತ ಹೋರಾಟದಿಂದ ಹೊರಹೋಮ್ಮಿದ ನಮ್ಮ SUCI(C)ಪಕ್ಷದ ಅಭ್ಯರ್ಥಿ ಭಾರತಿ. ಕೆ. ರವನ್ನು ಈಗ ಚುನಾವಣಾ ಕಣಕ್ಕೆ ಇಳಿಸಲಾಗಿದೆ. ಹಾಗಾಗಿ ನಮ್ಮ ಅಭ್ಯರ್ಥಿಯನ್ನು ಜನಗಳು ಬೆಂಬಲಿಸಬೇಕು ಹಾಗು ಚುನಾವಣೆಯಲ್ಲಿ ಗೆಲ್ಲಿಸಿ ಮುಂಬರುವ ಇನ್ನಷ್ಟು ಬಡವರ ಹಕ್ಕುಗಳ ಹೋರಾಟಕ್ಕೆ ಭಾರತೀಯವರೊಂದಿಗೆ ಜನ ನಿಲ್ಲಬೇಕು.’ ಎಂದು ಕರೆಕೊಟ್ಟರು.

ನಂತರದಲ್ಲಿ ಅಭ್ಯರ್ಥಿಯಾದ ಶ್ರೀಮತಿ ಕಾ.ಭಾರತಿ ರವರು ಮಾತನಾಡಿ ‘ನಾವು ನಮ್ಮ SUCI(C) ಪಕ್ಷದಿಂದ ಯಾವುದೇ ಚುನಾವಣೆಯನ್ನು ಒಂದು ಹೋರಾಟದ ಭಾಗ ಎಂದು ಪರಿಗಣಿಸಿದ್ದೇವೆ. ಬೇರೆ ಪಕ್ಷಗಳ ರೀತಿ ನಾವು ಕುರ್ಚಿಗಾಗಿ, ಅಧಿಕಾರದ ದುರಾಸೆಯಿಂದ ಕಣಕ್ಕೆ ಇಳಿಯುವುದಿಲ್ಲ. ಇಷ್ಟು ದಿನ ಬೆಲೆ ಏರಿಕೆ, ನಿರುದ್ಯೋಗ, ರೈತರ ಕೃಷಿ ಸಮಸ್ಯೆಗಳು, ಅತ್ಯಾಚಾರ, ಶಿಕ್ಷಣದ ವ್ಯಾಪಾರೀಕರಣ ಹಾಗು ಕಾರ್ಮಿಕರ ಹಕ್ಕುಗಳಿಗಾಗಿ ಬೀದಿಯಲ್ಲಿ ಕಟ್ಟಿದ ಹೋರಾಟವನ್ನೇ ನಾಳೆ ನಾನು ಗೆದ್ದು ಬಂದರೆ ವಿಧಾನ ಸಭೆಯ ಒಳಗೆ ಬಡವರ ಹಕ್ಕುಗಳಿಗಾಗಿ ಧ್ವನಿ ಎತ್ತಿ ಹೋರಾಟ ಕಟ್ಟುತ್ತೇನೆ.’ ಎಂದು ಭರವಸೆ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಪಕ್ಷದ ಸಂಘಟನಾಕಾರರು ಸೇರಿದಂತೆ ಹಲವಾರು ಬೆಂಬಲಿಗರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

SUCI(C) ಪಕ್ಷದಿಂದ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಭಾರತಿ. ಕೆ ನಾಮಪತ್ರ ಸಲ್ಲಿಕೆ.

ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಅಪರ್ಣ. ಬಿ. ಆರ್. ರವರು ಉಪಸ್ಥಿತರಿದ್ದರು. ಈ ಬಹಿರಂಗ ಸಭೆಯಲ್ಲಿ ಜಿಲ್ಲಾ ನಾಯಕರಾದ ಮಂಜುನಾಥ್ ಕುಕ್ಕುವಾಡ, ಸುಮಾ , ಶಿವಾಜಿ ರಾವ್, ಚಂದ್ರಶೇಖರಪ್ಪ ಶಿವನಳ್ಳಿ, ಮಧು ತೊಗಲೇರಿ, ತಿಪ್ಪೇಸ್ವಾಮಿ ಅಣಬೇರು, ಪೂಜಾ, ಕಾವ್ಯ, ಪರಶುರಾಮ, ಮಂಜುನಾಥ ರೆಡ್ಡಿ ,ಮಮತಾ, ಅನಿಲ್ ,‌ಸ್ಮಿತಾ,ಮನೋಜ್, ಇನ್ನೂ ಹಲವಾರು ಕಾರ್ಯಕರ್ತರು ಭಾಗವಹಿಸದ್ದರು

Leave a Reply

Your email address will not be published. Required fields are marked *

error: Content is protected !!