ಎಎಪಿಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿದ ಭಾಸ್ಕರ್ ರಾವ್

Bhaskar Rao said goodbye to AAP and joined BJP

ಎಎಪಿಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿದ ಭಾಸ್ಕರ್ ರಾವ್

ಬೆಂಗಳೂರು : ಎಎಪಿ ಸೇರಿ ಛಾಪು ಮೂಡಿಸಿದ್ದ ಸ್ವಯಂ ನಿವೃತ್ತಿ ಪಡೆದ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಎಎಪಿಗೆ ಗುಡ್‌ಬೈ ಬಿಜೆಪಿಗೆ ಸೇರಿದ್ದಾರೆ.
ಅವರು ರಾಜ್ಯ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಎಎಪಿ ತೊರೆದ ಭಾಸ್ಕರ್‌ ರಾವ್‌ ಅವರನ್ನು ಪಕ್ಷಕ್ಕೆ ಸ್ವಾಗತ ಮಾಡಿದ್ದಾರೆ. ಪಕ್ಷದ ಶಾಲು ಹಾಕಿ, ಧ್ವಜ ನೀಡಿ ಭಾಸ್ಕರ್ ರಾವ್ ಅವರನ್ನು ನಳಿನ್‌ ಕುಮಾರ್ ಕಟೀಲ್‌ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಇನ್ನು, ಭಾಸ್ಕರ್‌ ರಾವ್‌ ಅವರ ಜೊತೆ ಅವರ ಬೆಂಬಲಿಗರು ಸಹ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸೇರ್ಪಡೆ ಬಳಿಕ ಪ್ರತಿಕ್ರಿಯೆ ನೀಡಿದ ಭಾಸ್ಕರ್‌ ರಾವ್‌, ವಿಆರ್‌ಎಸ್‌ ತೆಗೆದುಕೊಂಡು ರಾಜಕೀಯ ಬದಲಾವಣೆಗೆ ಹೊರಟಿದ್ದೆ. ಆದರೆ, ಎಎಪಿ‌ ಕರ್ನಾಟಕದಲ್ಲಿ ಬೆಳೆಯುತ್ತಿಲ್ಲ. ಅವರ ಕಾರ್ಯವೈಖರಿ ಶೈಲಿಯಿಂದ ಬೆಳವಣಿಗೆ ಸಾಧ್ಯವಾಗುತ್ತಿಲ್ಲ. ಈಗ ನಾನು ಸನಾತನ ಧರ್ಮದ ಪಕ್ಷ, ರಾಷ್ಟ್ರೀಯತೆಯನ್ನ ಅಳವಾಗಿ ಮೈಗೂಡಿಸಿಕೊಂಡಿರುವ ಪಕ್ಷ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!