Big Impact: ಸಿ ಇ ಎನ್ ಪೊಲೀಸರ ಕಾರ್ಯಾಚರಣೆ | ಅಕ್ರಮವಾಗಿ 20 ಟನ್ ಪಡಿತರ ರಾಗಿ ಸಾಗಿಸುತ್ತಿದ್ದ ಲಾರಿ ವಶಕ್ಕೆ

Garudavoice Big Impact

ದಾವಣಗೆರೆ: ಬಡವರ ಹೊಟ್ಟೆ ತುಂಬಿಸುವುದಕ್ಕಾಗಿಯೇ ರಾಜ್ಯ ಸರ್ಕಾರ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಡಿ ನ್ಯಾಯಬೆಲೆ ಅಂಗಡಿಯಲ್ಲಿ ಉಚಿತವಾಗಿ ಅಕ್ಕಿ, ರಾಗಿ, ಗೋಧಿಯನ್ನು ನೀಡುತ್ತಿದೆ. ಆದರೆ, ನ್ಯಾಯಬೆಲೆ ಅಂಗಡಿಗಳ ಮಾಲೀಕರೆ ಇದನ್ನು ಸರಿಯಾಗಿ ಜನರಿಗೆ ವಿತರಿಸದೆ ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ಇತ್ತಿಚೆಗೆ ಈ ಅಕ್ರಮದ ಬಗ್ಗೆ ‘ಗರುಡಾ ವಾಯ್ಸ್’ ಸುದ್ದಿ ಮಾಡಿ ನಿದ್ದೆಗೆ‌ ಜಾರಿದ್ದ ಇಲಾಖೆಯನ್ನು ಎಚ್ಚರಿಸುವ ಕೆಲಸ ಮಾಡಿತ್ತು‌.

ಹೌದು, ಗರುಡಾವಾಯ್ಸ್ ಇತ್ತೀಚೆಗಷ್ಟೆ ನ್ಯಾಯಬೆಲೆ ಅಂಗಡಿಯವರು ರಾಗಿಯನ್ನು ಬೇರೊಂದು ಚೀಲಕ್ಕೆ ಹಾಕಿಕೊಂಡು ಅದನ್ನು ಬೇರೆಡೆ ಸಾಗಿಸಲಾಗಿರುವ ‘ರಾಗಿ ಮಾಫಿಯಾ’ ಬಗ್ಗೆ ಸುದ್ದಿ ಮಾಡಿತ್ತು.

ಸಿ ಇ ಎನ್ ತಂಡಕ್ಕೆ ಶಹಬ್ಬಾಸ್ ಗಿರಿ ನೀಡಿದ ಎಸ್ ಪಿ.
ನೂತನ ಎಸ್ ಪಿ ರಿಷ್ಯಂತ್ ಬಂದ ನಂತರ ಪಡಿತರ‌ ಅಕ್ಕಿಯನ್ನ ಅಕ್ರಮ ಸಾಗಾಟ ಹಾಗೂ ಮಾರಟಕ್ಕೆ ಕಡಿವಾಣ ಬಿದ್ದಿತ್ತು, ಆದರೆ ಪಡಿತರದ ರಾಗಿಯನ್ನ ಎಗ್ಗಿಲ್ಲದೆ ಅಕ್ರಮವಾಗಿ ಖರೀದಿಸಿ ಮಾರಾಟ ಮಾಡಲಾಗುತ್ತಿತ್ತು, ಇದನ್ನ ಮನಗಂಡಂತಹ ಎಸ್ ಪಿ ಸೈಬರ್, ಎಕನಾಮಿಕ್ಸ್,ನಾರ್ಕೊಟಿಕ್ಸ್ ತಂಡದವರಿಗೆ ಅಕ್ರಮ ರಾಗಿ ಹಾಗೂ ಅಕ್ಕಿ ಸರಬರಾಜು ಮಾಡುವವರ ಬಗ್ಗೆ ಮಾಹಿತಿ ಸಂಗ್ರಹಿಸಿ ಕೇಸ್ ಮಾಡುವಂತೆ ಹೇಳಿದ್ದರು. ಇದರ ಹಿನ್ನೆಲೆ ಮಾಹಿತಿದಾರರು ನೀಡಿದ ಮಾಹಿತಿಯಂತೆ ದಾವಣಗೆರೆಯಿಂದ ಹೊರ ರಾಜ್ಯಕ್ಕೆ ಸಾಗಿಸಲು ರಾಗಿಯನ್ನ ಲಾರಿಯಲ್ಲಿ ತುಂಬಿಕೊಂಡಿದು ಕಂಡುಬಂದ ಹಿನ್ನೆಲೆ, ಲಾರಿಯನ್ನ ವಶಕ್ಕೆ ಪಡೆಯಲಾಗಿದೆ. ಪಡಿತರ ರಾಗಿ ಅಕ್ರಮ ಮಾರಾಟ ಹಾಗೂ ಸಾಗಟದ ಬಗ್ಗೆ ಗರುಡವಾಯ್ಸ್ ತನಿಖಾ ತಂಡ ಗುಪ್ತ ಕಾರ್ಯಚರಣೆ ನಡೆಸಿದ್ದರ ಫಲವಾಗಿ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟವಾಗುವುದನ್ನ ತಡೆಯುವಲ್ಲಿ ಸಫಲವಾಗಿದೆ.

 

ನಮ್ಮ ಗರುಡಾವಾಯ್ಸ್ ಫಲಶೃತಿಯಿಂದಾಗಿ ಈಗ ಆಹಾರ ಇಲಾಖೆ ಕೂಡ ಎಚ್ಚೆತ್ತುಕೊಂಡಿದ್ದು, ದಾವಣಗೆರೆ ಆಹಾರ ಇಲಾಖೆಯ ಕಚೇರಿಯ ಸಹಾಯಕ ನಿರ್ದೇಶಕರು ‘ರಾಗಿ ಮಾಫಿಯ’ ನಡೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ರಾಗಿ ತುಂಬಿದ್ದ ಲಾರಿ ದಾವಣಗೆರೆಯಿಂದ ಚಿತ್ರದುರ್ಗ ಮಾರ್ಗವಾಗಿ, ಶಾಮನೂರು ಮೂಲಕ ರಾಗಿ ಸಾಗಿಸಲಾಗುತ್ತಿರುವುದು ಖುದ್ದು ತಮ್ಮ ಗಮನಕ್ಕೆ ಬಂದಿದೆ. ಆದ್ದರಿಂದ ತಪಿತಸ್ಥರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇವರ ದೂರಿನಂತೆ ವಿದ್ಯಾನಗರ ಠಾಣೆಯ ಪೊಲೀಸ್ ಎಫ್ ಐ ಆರ್ ಮಾಡಿದ್ದಾರೆ. ಹಾಗೂ ಲಾರಿಯಲ್ಲಿ 20 ಟನ್ ಗಿಂತ ಹೆಚ್ಚಿರುವ ರಾಗಿಯನ್ನ ವಶಕ್ಕೆ ಪಡೆಯಲಾಗಿದೆ.

 

ಒಟ್ಟಿನಲ್ಲಿ ಬಡಜನರ ಹೊಟ್ಟೆ ತುಂಬಿಸಬೇಕಿರುವ ಪಡಿತರ ಕಾಳಸಂತೆಯಲ್ಲಿ ಎಗ್ಗಿಲ್ಲದೇ ಮಾರಾಟ ಆಗುತ್ತಿದ್ದು, ಈ ಬಗ್ಗೆ ಆಹಾರ ಇಲಾಖೆಯವರು ಪೊಲೀಸ್ ಇಲಾಖೆ ಜೊತೆ ಸೇರಿ ಸಂಬಂಧಿಸಿದವರ ವಿರುದ್ದ ಅಕ್ರಮಕ್ಕೆ ಕಡಿವಾಣ ಹಾಕಬೇಕಿದೆ.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!