ಬೆಂಗಳೂರು: ಬಿಜೆಪಿ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ರಿಲೀಸ್ ಮಾಡಿದ್ದು, ಶಿವಮೊಗ್ಗ ಹಾಗೂ ಮಾನ್ವಿ ಕ್ಷೇತ್ರಗಳನ್ನು ಬಿಟ್ಟು ಉಳಿದೆಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಯಾದಂತಿದೆ. ಮೂರನೇ ಪಟ್ಟಿಯಲ್ಲಿ 10 ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ.
ಸೋಮವಾರ ಬಿಡುಗಡೆ ಮಾಡಿರುವಪಟ್ಟಿಯಲ್ಲಿ ಇಬ್ಬರು ಹಾಲಿ ಶಾಸಕರಾದ ಎಸ್.ಎ.ರಾಮದಾಸ್ ಹಾಗೂ ಅರವಿಂದ ಲಿಂಬಾವಳಿಗೆ ಟಿಕೆಟ್ ನೀಡಿಲ್ಲ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಿದ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆಪ್ತ ಮಹೇಶ್ ಟೆಂಗಿನಕಾಯಿಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ನೀಡಿದೆ.
ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ನೀಡದೇ ಮಂಜುಳಾ ಅಮರೇಶ್ ಅವರಿಗೆ ಟಿಕೆಟ್ ನೀಡಲಾಗಿದೆ.
3ನೇ ಪಟ್ಟಿಯಲ್ಲಿನ ಅಭ್ಯರ್ಥಿಗಳ ವಿವರ:
ಹುಬ್ಬಳ್ಳಿ ಧಾರವಾಡ ಸೆಂಟ್ರಲ್- ಮಹೇಶ್ ಟೆಂಗಿನಕಾಯಿ
ಹಗರಿ ಬೊಮ್ಮನಹಳ್ಳಿ- ಬಿ. ರಾಮಣ್ಣ
ಗೋವಿಂದರಾಜನಗರ – ಉಮೇಶ್ ಶೆಟ್ಟಿ
ಮಹದೇವಪುರ – ಮಂಜುಳಾ ಅರವಿಂದ್ ಲಿಂಬಾವಳಿ
ಸೇಡಂ – ರಾಜಕುಮಾರ ಪಾಟೀಲ್
ಕೊಪ್ಪಳ – ಮಂಜುಳಾ ಅಮರೇಶ್
ಹೆಬ್ಬಾಳ – ಕಟ್ಟಾ ಪುತ್ರ ಜಗದೀಶ್
ಕೃಷ್ಣ ರಾಜ – ಶ್ರೀವತ್ಸ
ರೋಣ- ಕಳಕಪ್ಪ ಬಂಡಿ ಹಾಲಿ ಶಾಸಕ
ನಾಗಠಾಣ- ಸಂಜೀವ ಐಹೊಳೆ
