ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ಪ್ರಚಾರಾರಂಭ

ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ. ಬಸವರಾಜ್ ನಾಯ್ಕ್ ಶುಕ್ರವಾರ ಶಾಸಕ ಎಸ್.ಎ ರವೀಂದ್ರನಾಥ, ಮಾಯಕೊಂಡ ಹಾಲಿ ಶಾಸಕ ಪ್ರೊ. ಲಿಂಗಣ್ಣ ಅವರೊಂದಿಗೆ ಕುರುಡಿ ಗ್ರಾಮದ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಬಸವರಾಜ್ ನಾಯ್ಕ್, ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಇಂದು ಪ್ರಚಾರ ಆರಂಭಿಸಿದ್ದೇನೆ. ಮಾಯಕೊಂಡ ಬಿಜೆಪಿಯ ಭದ್ರಕೋಟೆ ಇಲ್ಲಿಂದ ಗೆದ್ದು ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಕೈ ಬಲಪಡಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಮಾಯಕೊಂಡದಲ್ಲಿ ಬಂಡಾಯವೆದ್ದಿರುವ ಪ್ರಶ್ನಿಗೆ ಉತ್ತರಿಸಿ, ಬಿಜೆಪಿಯಲ್ಲಿ ಬಂಡಾಯ ಅನ್ನುವ ಪ್ರಶ್ನೆಯಿಲ್ಲ. ಪಕ್ಷದಿಂದ ಯಾರು ಸಿಡಿದು ನಿಲ್ಲುವುದಿಲ್ಲ. ಬಂಡಾಯ ಅಭ್ಯರ್ಥಿಗಳ ಜೊತೆ ತಾಲೂಕು ಅಧ್ಯಕ್ಷರು ಮಾತನಾಡಿದ್ದಾರೆ. ಎರಡು ದಿನಗಳಲ್ಲಿ ಎಲ್ಲವು ಸರಿಯಾಗುತ್ತೆ. ಹಾಲಿ ಶಾಸಕ ಪ್ರೊಫೆಸರ್ ಲಿಂಗಣ್ಣ ನಮ್ಮ ಜೊತೆ ಇದ್ದಾರೆ. ಮಾಯಕೊಂಡದಲ್ಲಿ ಪಕ್ಷ ಕಟ್ಟಿ ಬೆಳೆಸಿದ ರವೀಂದ್ರನಾಥ ಪೂಜೆಗೆ ಬಂದಿದ್ದಾರೆ. ಇಂದು ಅಥವಾ ನಾಳೆ ಎಲ್ಲವು ಸರಿಯಾಗುತ್ತೆ. ಅವರು ನಮ್ಮ ಜೊತೆ ಪ್ರಚಾರಕ್ಕೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.