ಬಿಜೆಪಿ ಬೆಂಬಲಿತ ಕಾಂಗ್ರೆಸ್ ನ ಸದಸ್ಯ ಮೇಯರ್ ಆಗಿ ಆಯ್ಕೆ ಕೈ ಹಿಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಚಾಣಕ್ಷತನ

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಚಾಣಕ್ಷತನ
ದಾವಣಗೆರೆ : ಇಲ್ಲಿನ ನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ತಮ್ಮ ಪಕ್ಷದ ಗೆಲುವಿಗಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಅವರು ನಡೆಸಿದ ರಾಜಕೀಯ ಚಾಣಕ್ಷತನ ಕೆಲಸ ಮಾಡಿದೆ.
ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಸದಸ್ಯ ವಿನಾಯಕ ಪೈಲ್ವಾನ್ ಮೇಯರ್ ಸ್ಥಾನಕ್ಕಾಗಿ ಬಿಜೆಪಿ ಪಾಳ್ಯದಲ್ಲಿ ಗುರುತಿಸಿಕೊಂದಿದ್ದರಿಂದ ಮೇಯರ್ ಪಟ್ಟ ಅಲಂಕರಿಸಿದರು.
ಸತತ ನಾಲ್ಕನೇ ಬಾರಿಗೂ ಆಪರೇಷನ್ ಕಮಲದ ಮೂಲಕ ಗದ್ದಲದ ನಡುವೆ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಸವಿತಾ ಗಣೇಶ್ ಮತ್ತು ವಿನಾಯಕ ಪೈಲ್ವಾನ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಶಿವಲೀಲಾ ಕೊಟ್ರೇಶ್ ಯಶೋದಾ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ನ ಸದಸ್ಯರಾದ ಸವಿತಾ ಗಣೇಶ್ ಹುಲ್ಲಮನಿ ಅವರನ್ನು ಮೇಯರ್ ಮಾಡುವುದಾಗಿ ಭರವಸೆ ನೀಡಿದ್ದ ಹಿನ್ನೆಲೆ ವಿನಾಯಕ ಪೈಲ್ವಾನ್ ಅಸಮಾಧಾನಗೊಂಡು ಮೇಯರ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 7ರ ನಗರ ಪಾಲಿಕೆ ಸದಸ್ಯರಾಗಿರುವ ವಿನಾಯಕ ಪೈಲ್ವಾನ್ ಸ್ಪರ್ಧೆಗಿಳಿದು ಮಹಾಪೌರರಾಗಿ ಆಯ್ಕೆಯಾಗಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಸರ್ಕಾರವನ್ನು ಉಳಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿರುವ ಕಾರಣ ಈ ನಿಟ್ಟಿನಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಅವರು ಮೇಯರ್ ಚುನಾವಣೆಯಲ್ಲಿ ಚಾಣಕ್ಷತನ ತೋರಿದ್ದರಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿನಾಯಕ್ ಪೈಲ್ವಾನ್ ಗೆಲುವು ಸಾಧಿಸಿದಂತಾಗಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರ ಈ ನಡೆ ಬಿಜೆಪಿಯಲ್ಲಿ ಪ್ರಶಂಸೆಗೆ ಕಾರಣವಾಗಿದ್ದು, ಅಭಿನಂದನೆಗಳು ಸಹ ವ್ಯಕ್ತವಾಗುತ್ತಿದೆ.