ದಾವಣಗೆರೆ: ಬಿಜೆಪಿ ಎಂದರೆ ವಿಶೇಷ ಆಲೋಚನೆ ದೂರದೃಷ್ಟಿ ಚಿಂತನೆ ಮಾಡುವ ಪಕ್ಷ. ಈ ಬಾರಿ ವಿಧಾನಸಭಾ ಚುನಾವಣೆ ಎಲ್ಲಾ ಸಮಾಜಕ್ಕೂ ಆದ್ಯತೆ ಕಲ್ಪಿಸಿದ್ದು ಸರ್ವರನ್ನು ಸಮಾನಚಾಗಿ ಜೊತೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದೆ.
ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿದರೆ ದೇಶವೇ ಕರ್ನಾಟಕದ ತಿರುಗಿ ನೋಡುವಂತೆ ಬಿಜೆಪಿ ಸರ್ಕಾರ ಮಾಡಿದೆ. ಸಾಮೂಹಿಕ ನಾಯಕತ್ವ ಮೂಲಕ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದು ಎಲ್ಲಾ ಸಮಾಜವನ್ನು ಸಮಾನವಾಗಿ ಕಾಣುತ್ತಾ ಚುನಾವಣೆ ಎದುರಿಸುತ್ತಿದೆ. ಕರ್ನಾಟಕದಲ್ಲಿ ಈ ಬಾರಿ ಇತಿಹಾಸ ಬರೆಯಲಿದೆ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಹೊಸ ಸರ್ಕಾರ ರಚನೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶೋಷಿತ ವರ್ಗಗಳ ಮುಖಂಡರಾದ ಬಾಡದ ಆನಂದರಾಜು ತಿಳಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತದೆ ದಾವಣಗೆರೆಯಲ್ಲಿ ಈ ಬಾರಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದರು, ಸೋಲಿಲ್ಲದ ಸರದಾರರಾದ ಸಂಸದ ಸಿದ್ದೇಶ್ವರ್ ಹಾಗೂ ಶಾಸಕ ಎಸ್ ಎ ರವೀಂದ್ರನಾಥ್ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಪಕ್ಷಕ್ಕೆ ಶ್ರೀ ರಕ್ಷೆಯಾಗಲಿದೆ. ಯಾರು ಮಾಡದಂತ ಮೀಸಲಾತಿ ಹೆಚ್ಚಳವನ್ನ ಬಿಜೆಪಿ ಪಕ್ಷ ಮಾಡಿದ್ದು ಇತಿಹಾಸ ಸೃಷ್ಟಿಸಿದೆ ಇಂಥ ಪಕ್ಷಕ್ಕೆ ಬಿಟ್ಟರೆ ಜನರು ಬೇರೆ ಯಾವ ಪಕ್ಷಕ್ಕೆ ಜನ ಮತ ಹಾಕುತ್ತಾರೆ ಹೇಳಿ ಎಂದರು. ಜಿಲ್ಲೆಯಲ್ಲಿ ಬಿಜೆಪಿ ಪ್ರಚಾರದ ವೇಳೆ ಜನರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಂತೆ ದುಡ್ಡು ಕೊಟ್ಟು ಜನರನ್ನ ಪ್ರಚಾರಕ್ಕೆ ಕರೆ ತರುತ್ತಿಲ್ಲ. ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳ ಪರ ಕಾರ್ಯಕರ್ತರು ಹಗಲಿರುಳು ಪ್ರಚಾರ ನಡೆಸುತ್ತಿದ್ದಾರೆ.
ಬಿಜೆಪಿಗೆ ಜನರೇ ಶಕ್ತಿ, ಕಾರ್ಯಕರ್ತರೇ ಉಸಿರು ಅಭಿವೃದ್ಧಿಯೇ ನಮ್ಮ ಗುರಿ ಎಂಬ ತತ್ವದ ಮೇಲೆ ಈ ಬಾರಿ ಚುನಾವಣೆ ನಡೆಯುತ್ತಿದ್ದು ಬಿಜೆಪಿ ರಚಿಸುವ ಸರ್ಕಾರವನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಬಾಡದ ಆನಂದರಾಜು ತಿಳಿಸಿದರು.
