ಬಿಜೆಪಿ ಕಚೇರಿಯಲ್ಲಿ ಮಂಗಳಗೌರಿ ಪೂಜೆ ಆಚರಣೆ

ದಾವಣಗೆರೆ: ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚ ವತಿಯಿಂದ ಇಂದು ಬಿಜೆಪಿ ಕಚೇರಿಯಲ್ಲಿ ಮಂಗಳಗೌರಿ ಪೂಜೆ ಆಚರಿಸಲಾಯಿತು.
ಮಹಿಳಾ ಮೊರ್ಚದ ಜಿಲ್ಲಾಧ್ಯಕ್ಷೆ ಮಂಜುಳ ಮಹೇಶ್, ನಗರ ಪಾಲಿಕೆ ಸದಸ್ಯ ವೀಣಾ ನಂಜಪ್ಪ, ಪ್ರಧಾನ ಕಾರ್ಯದರ್ಶಿ ಪುಷ್ಪವಾಲಿ, ಭಾಗ್ಯ ಪಿಸಾಳೆ, ಪದಾಧಿಕಾರಿಗಳಾದ ಸರ್ವಮಂಗಳ, ಕುಮಾರಿ ಜಯಲಕ್ಷ್ಮಿ, ಸರಸ್ವತಿ ಸೇರಿದಂತೆ ಎಲ್ಲ ಮಂಡಲದ ಪದಾಧಿಕಾರಿಗಳು, ನಗರ ಪಾಲಿಕೆ ಸದಸ್ಯರು ಪೂಜೆಯಲ್ಲಿ ಭಾಗವಹಿಸಿದ್ದರು.