ಸ್ಮಾರ್ಟ್ ಸಿಟಿ, ಸ್ಮಾರ್ಟ್ ಯಂಗ್ ಲೀಡರ್ ಗೆ ಬಿಜೆಪಿ ಟಿಕೆಟ್ : ಸಿದ್ದಣ್ಣ, ರವೀಂದ್ರನಾಥ ನೇತೃತ್ವದಲ್ಲಿ ಚುನಾವಣೆ : ಬಾಡದ ಆನಂದರಾಜು
ದಾವಣಗೆರೆ : ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುವಂತ ಪಕ್ಷ ಬಿಜೆಪಿ ಎಂದರೆ ತಪ್ಪಾಗಲ್ಲ. ರಾಷ್ಟ್ರೀಯ ನಾಯಕರು ತಳಮಟ್ಟದ ಕಾರ್ಯಕರ್ತರನ್ನ ಗುರುತಿಸಿ ಟಿಕೆಟ್ ನೀಡಿದ್ದಾರೆ ದಕ್ಷಿಣಕ್ಕೆ ಬಿಜಿ ಅಜಯ್ ಕುಮಾರ್ ಉತ್ತರಕ್ಕೆ ನಾಗರಾಜ್ ಲೋಕಿಕೆರೆ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದು ನಿಜಕ್ಕೂ ಗೆಲ್ಲುವ ಕುದುರೆಗಳನ್ನ ಆಯ್ಕೆ ಮಾಡಿದೆ ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜು ತಿಳಿಸಿದ್ದಾರೆ. ಇತರೆ ರಾಷ್ಟ್ರೀಯ ಪಕ್ಷಗಳಲ್ಲಿ ಟಿಕೆಟ್ ಗಾಗಿ ದೆಹಲಿಯಲ್ಲಿ ನಾಯಕರ ಮನೆ ಬಾಗಿಲು ಕಾಯುವಂತ ಸಂಸ್ಕೃತಿ ಇಂದಿಗೂ ಇದೆ. ಆದರೆ ಬಿಜೆಪಿಯಲ್ಲಿ ಪ್ರಾಮಾಣಿಕವಾಗಿ ಪಕ್ಷದ ಕೆಲಸ ಮಾಡಿದವರು ನಾಯಕರ ಮನೆ ಬಾಗಿಲಿಗೆ ಹೋಗುವ ಅವಶ್ಯಕತೆ ಇಲ್ಲ ಎಂಬುದನ್ನ ತೋರಿಸಿಕೊಟ್ಟಿದೆ. ಸ್ಮಾರ್ಟ್ ಸಿಟಿಗೆ ಇಂಥ ಸ್ಮಾರ್ಟ್ ಯುವ ನಾಯಕರನ್ನ ಆಯ್ಕೆ ಮಾಡಿರುವುದು ಪಕ್ಷದ ಸಣ್ಣ ಕಾರ್ಯಕರ್ತರಿಗೂ ಹೊಸ ಉಮ್ಮಸ್ಸು ನೀಡಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲಾ ಸಮಾಜದವರಿಗೆ ಬೇಕಾದ ಸಂಸದರಾದ ಸಿದ್ದೇಶ್ವರ್ ಹಾಗೂ ಹಾಲಿ ಶಾಸಕರಾದ ಎಸ್ ರವೀಂದ್ರನಾಥ್ ಅವರು ಇಂಥ ಯುವ ನಾಯಕರಿಗೆ ಟಿಕೆಟ್ ಕೊಡಿಸುವ ಮೂಲಕ ಕುಟುಂಬ ರಾಜಕರಣ ಬಿಜೆಪಿ ಪಕ್ಷದ ಸಂಸ್ಕೃತಿಯಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಟೀಕೆ ಮಾಡುವಂತ ಕಾಂಗ್ರೆಸ್ ಗ ತಕ್ಕ ಉತ್ತರ ನೀಡಿದ್ದಾರೆ. ವಯೋ ಸಹಜತೆಯಿಂದ ಚುನಾವಣೆ ರಾಜಕೀಯಕ್ಕೆ ಸ್ವಯಂ ನಿವೃತ್ತಿ ಘೋಷಿಸಿದ ಎಸ್ ರವೀಂದ್ರನಾಥ್ ಮಾದರಿ ರಾಜಕಾರಣಿಯಾಗಿದ್ದಾರೆ. ಈ ಮುಲಕ ಯುಕರಿಗೆ ಸ್ಪೂರ್ಥಿಯಾಗಿದ್ದು ಉತ್ತರ ಮತ್ತು ದಕ್ಷಿಣದಲ್ಲಿ ಬಿಜೆಪಿಯ ಕಮಲ ಅರಳುವುದರಲ್ಲಿ ಯಾವುದೇ ಅನುಮಾನವಿಲ್ಲ. ದಾವಣಗೆರೆಯನ್ನ ಜೋಡೆತ್ತುಗಳಾದ ಸಿದ್ದಣ್ಣ ಹಾಗೂ ರವೀಂದ್ರನಾಥ್ ವಿಶ್ವ ನೋಡುವಂತೆ ಮಾಡಿದ್ದಾರೆ. ರವೀಂದ್ರನಾಥ್ ಅವರು ಸರಳ ಸಜ್ಜನಿಕೆ ರಾಜಕಾರಣಿಯಾಗಿ ಭ್ರಷ್ಟಾಚಾರವಿಲ್ಲದೆ ಆಡಳಿತ ನಡೆಸಿದ್ದು ಈ ಬಾರಿ ಗೆಲುವಿಗೆ ರವೀಂದ್ರನಾಥ್ ಸಾಧನೆಗಳೇ ಸಾಕು ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜು ತಿಳಿಸಿದರು.
ದಕ್ಷಿಣ ಕ್ಷೇತ್ರದಲ್ಲಿ ಅಜಯ್ ಕುಮಾರ್ ಗೆಲುವನ್ನ ಯಾರು ತಡೆಯಲು ಸಾಧ್ಯವಿಲ್ಲ ಯುವ ರಾಜಕಾರಣಿಯಾದ ಅಜಯ್ ಕುಮಾರ್ ಕಾಂಗ್ರೆಸ್ ವಿರುದ್ಧ ಗೆದ್ದೇ ಗೆಲ್ಲುತ್ತಾರೆ, ಉತ್ತರದಲ್ಲಿ ಸರಳ ಸಜ್ಜನಿಕೆ ರಾಜಕಾರಣಿ ನಾಗರಾಜ್ ಲೋಕಿಕೆರೆ ಕೂಡ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಉಭಯ ನಾಯಕರು ದಾವಣಗೆರೆಯಲ್ಲಿ ಹೊಸ ದಾಖಲೆ ಬರೆಯಲಿದ್ದಾರೆ. ರಾಜಕೀಯ ಚಿತ್ರಣವನ್ನೇ ಬದಲಿಸಲಿದ್ದಾರೆ ಎಂದು ಬಾಡದ ಆನಂದರಾಜು ತಿಳಿಸಿದರು.ಇದೇ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯ ಮಂಜುನಾಯ್ಕ್.ಶ್ಯಾಮನೂರು ಗಿರೀಶ್.ಮಹಿಳಾ ಮುಖಂಡರಾದ ಚೇತನಾ.ಸಲೀನಾ.ಭಾಗ್ಯ ಪಿಸಾಳೆ ಇನ್ನೂ ಮುಂತಾದವರು ಶುಭ ಕೋರಿದರು.