ಗುತ್ತಿಗೆ ಪೌರ ಕಾರ್ಮಿಕರ ನೇರಪಾವತಿಗೆ ಒತ್ತಾಯಿಸಿ ನಾಳೆ ಪ್ರಧಾನಿಗೆ ಕಪ್ಪು ಪಟ್ಟಿ ಪ್ರದರ್ಶನ
ದಾವಣಗೆರೆ: ನಗರ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ನೌಕರರನ್ನು ನೇರಪಾವತಿ ಮಾಡದ ರಾಜ್ ಸರ್ಕಾರದ ವಿರುದ್ಧ ಇದೇ ಮಾರ್ಚ್ 13ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ವಾಲ್‌ಮ್ಯಾನ್ ಸಂಘದ ಅಧ್ಯಕ್ಷ ಎನ್. ನೀಲಗಿರಿಯ್ಪ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.12ರಂದು ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ವೇಳೆ ಕಪ್ಪು ಬಾವಟ ಪ್ರದರ್ಶಿಸಿ ಪ್ರತಿಭಟಿಸಲಾಗುತ್ತದೆ ಎಂದು ಹೇಳಿದರು.
ನಗರಗಳ ಸ್ವಚ್ಛತೆಯಲ್ಲಿ ಕೊಡಗಿಸಿಕೊಂಡಿರುವ ಕಸದ ವಾಹನ ಚಾಲಕರು, ನೀರುಸರಬರಾಜು ಸಹಾಯಕರು, ಲೋಡರ್ಸ್, ಕ್ಲೀನರ್ಸ್, ಹೆಲ್ಪರ್ಸ್, ಯುಜಿಡಿ ಕಾರ್ಮಿಕರು ಸೇರಿದಂತೆ ವಿವಿಧ ಹೊರ ಗುತ್ತಿಗೆ ನೌಕರರನ್ನು ಪೌರ ಕಾರ್ಮಿಕ ಮಾದರಿಯಲ್ಲಿ ಶೀಘ್ರವೇ ನರ ಪಾವತಿಗೆ ಒಳಪಡಿಸಬೇಕು ಎಂದವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ದುಗ್ಗೇಶ್ ಎಂ.ಆರ್., ಕಿರಣ್ ಕುಮಾರ್, ನವೀನ್ ಕುಮಾರ್, ರವಿಕುಮಾರ್ ಇತರರು ಉಪಸ್ಥಿತರಿದ್ದರು.