ಲೋಕಲ್ ಸುದ್ದಿ

9 ನೇ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬಿಎನ್ ಮಲ್ಲೇಶ್

ದಾವಣಗೆರೆ: ದಾವಣಗೆರೆ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಇದೆ ಫೆಬ್ರವರಿ 27 ರಂದು ದಾವಣಗೆರೆ ತಾಲೂಕಿನ ಹೊಸ ಬೆಳವನೂರಿನಲ್ಲಿ ನಡೆಯಲಿದೆ.
ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ  ದಾವಣಗೆರೆಯ ಹೆಸರಾಂತ ಪತ್ರಕರ್ತ, ಸಾಹಿತಿ, ಲೇಖಕ, ಕವಿ, ಕಥೆಗಾರ, ಅಂಕಣಕಾರರಾದ ಬಿ ಎನ್ ಮಲ್ಲೇಶ್ ರವರನ್ನು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ ನವರ ಮಾರ್ಗದರ್ಶನದಲ್ಲಿ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ದಾವಣಗೆರೆ ತಾಲ್ಲೂಕು ಕಸಾಪ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ತಿಳಿಸಿದ್ದಾರೆ.

ಬಿ ಎನ್ ಮಲ್ಲೇಶ್ ರವರ ಪರಿಚಯ ಮಾಹಿತಿ:

ಬಿ.ಎನ್. ಮಲ್ಲೇಶ್ ರವರು ಬಿಎಸ್ಸಿ, ಎಂಎ, ಎಲ್ ಎಲ್ ಬಿ. ಪದವೀಧರರಾಗಿದ್ದು,

ದಾವಣಗೆರೆ ನಗರವಾಣಿ ದಿನಪತ್ರಿಕೆ ಯಲ್ಲಿ ( 38 ವರ್ಷಗಳಿಂದ) ಸಹ ಸಂಪಾದಕರಾಗಿ,

ಉದಯ ನ್ಯೂಸ್ ಜಿಲ್ಲಾ ವರದಿಗಾರರಾಗಿ ದಾವಣಗೆರೆ ಬ್ಯೂರೋ ( 20 ವರ್ಷ, 1998-2018)

ದಾವಣಗೆರೆ ವಿಶ್ವವಿದ್ಯಾಲಯದ ಅಕೆಡೆಮಿಕ್ ಕೌನ್ಸಿಲ್ ನ ಮಾಜಿ ಸದಸ್ಯರಾಗಿ, ಕರ್ನಾಟಕ ಸರ್ಕಾರದ ಅಭಿವೃದ್ಧಿ ಪತ್ರಿಕೋದ್ಯಮ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಆಯ್ಕೆಯಲ್ಲಿ 2 ವರ್ಷ ತೀರ್ಪುಗಾರರಾಗಿ, ದಾವಣಗೆರೆ ಜಿಲ್ಲಾ ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಇದುವರೆಗೂ ನಾಲ್ಕು ಪುಸ್ತಕಗಳು ಪ್ರಕಟಿಸಿದ್ದು,ಎರಡು ರಾಜಕೀಯ ವಿಡಂಬನೆ, ಎರಡು ಕವನ ಸಂಕಲನಗಳನ್ನು ಹೊರ ತಂದಿದ್ದಾರೆ. ಇವರು ಪ್ರಜಾವಾಣಿ ಪತ್ರಿಕೆಯಲ್ಲಿ 10 ವರ್ಷ ದಿಂದ ಅಂಕಣಕಾರರಾಗಿ (ವಿನೋದ, ಚುರುಮುರಿ ). ಆಕಾಶವಾಣಿ, ದೂರದರ್ಶನ,ಹಾಗೂ ನಾಡಿನ ಎಲ್ಲ ಪತ್ರಿಕೆಗಳಲ್ಲಿ ಇವರ ಕಥೆ, ಕವನ, ಲೇಖನಗಳು ಪ್ರಕಟಗೊಂಡಿವೆ.

ಇವರ ಮೊನಚಾದ ಲೇಖನಿಯಿಂದ ಮೂಡಿ ಬಂದ ಕಥೆ ಕವನ ಲೇಖನ ಅಂಕಣ ಹಾಗೂ ಪತ್ರಿಕೋದ್ಯಮದ ಇವರ ಕಾರ್ಯ ವೈಖರಿಯಿಂದ ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ. ಇವರಿಗೆ

1. ಕರ್ನಾಟಕ ಸರ್ಕಾರ ಕೊಡ ಮಾಡುವ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ,

2. ‘ಅಮ್ಮ’ ಸಾಹಿತ್ಯ ಪ್ರಶಸ್ತಿ ಗುಲ್ಬರ್ಗಾ.

3. ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡ ಮಾಡುವ ‘ಮಹಲಿಂಗರಂಗ’ ಪ್ರಶಸ್ತಿ ದಾವಣಗೆರೆ.

4. ದಾವಣಗೆರೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ .

5. ಹಂಪಿ ಉತ್ಸವದ ಕವಿಗೋಷ್ಠಿ ಅಧ್ಯಕ್ಷತೆ.

6. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ನಾಡಿಗೇರ ಕೃಷ್ಣರಾಯ ರಾಜ್ಯ ಪ್ರಶಸ್ತಿ ಗಳು ಲಭಿಸಿವೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!