ಕಾರ್ಮಿಕ ಸಚಿವರ ಪುತ್ರನ ಕಾರ್ಖಾನೆಯಲ್ಲಿ ಬಾಲಕ ಸಾವು
ಶಿಗ್ಗಾವಿ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರ ಪುತ್ರ ವಿವೇಕ ಹೆಬ್ಬಾರ್ ಮಾಲೀಕತ್ವದ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಯಂತ್ರದ ಬೆಲ್ಟ್ ಗೆ ಸಿಲುಕಿ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
ಶಿಗ್ಗಾವಿ ತಾಲ್ಲೂಕಿನ ದುಂಢಸಿ ಗ್ರಾಮದ ನವೀನ ಬಸಪ್ಪ ಚಲವಾದಿ(19) ಮೃತಪಟ್ಟ ಕಾರ್ಮಿಕ. ಕಬ್ಬು ತುಂಬುವ ಯಂತ್ರದ ಬೆಲ್ಟಿಗೆ ನವೀನನ ಎರಡು ಕೈಗಳು ಸಿಲುಕಿ ತುಂಡಾಗಿ, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಕಾರ್ಖಾನೆ ಮಾಲೀಕ ವಿವೇಕ ಹೆಬ್ಬಾರ್, ಜನರಲ್ ಮ್ಯಾನೇಜರ್ ಮಂಜುನಾಥ, ಲೇಬರ್ ಸಪ್ಲೈರ್ಗಳಾದ ಬಸವರಾಜ, ಉಮೇಶ ಸುರವೇ, ವಿಶ್ವನಾಥ ಎ.ಎಸ್, ಆಕಾಶ ಧರ್ಮೋಜಿ ಸೇರಿದಂತೆ 6 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.