ಲೋಕಲ್ ಸುದ್ದಿ

ಮಹಾನಗರ ಪಾಲಿಕೆಯ ಬ್ರಷ್ಟ ದ್ವಿತೀಯ ದರ್ಜೆ ಸಹಾಯಕ ಪಾಲಾನಾಯ್ಕ ಸಸ್ಪೆಂಡ್

ಮಹಾನಗರ ಪಾಲಿಕೆಯ ಬ್ರಷ್ಟ ದ್ವಿತೀಯ ದರ್ಜೆ ಸಹಾಯಕ ಪಾಲಾನಾಯ್ಕ ಸಸ್ಪೆಂಡ್

ದಾವಣಗೆರೆ : ಮಹಾನಗರ ಪಾಲಿಕೆ ಕಂದಾಯ ಶಾಖೆಯ ದ್ವಿತೀಯ ದರ್ಜೆ ಸಹಾಯಕ ಜಿ. ಪಾಲಾನಾಯ್ಕ ಅವರನ್ನು ಅಮಾನತುಗೊಳಿಸಿ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕ ಆದೇಶಿಸಿದ್ದಾರೆ.
ಕರ್ತವ್ಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಉದ್ದೇಶಪೂರ್ವಕವಾಗಿ ಮೂಲ ಖಾತೆದಾರರಿಗೆ ಮೋಸ ಮಾಡಿ ಆಸ್ತಿ ಮಾಲೀಕರಲ್ಲದವರಿಗೆ ಆಸ್ತಿ ಹಕ್ಕು ವರ್ಗಾವಣೆ ಮಾಡಿರುವುದರಿಂದ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.
ಡೋರ್ ನಂಬರ್ 1910/184ರ ವರ್ಗಾವಣೆಯನ್ನು ಮೂಲ ಖಾತೆದಾರರಾದ ಎಂ.ತಿಪ್ಪಣ್ಣ ಬಿನ್ ಮುನಿಯಪ್ಪ ಇವರಿಂದ ರುದರಮ್ಮ ಕೋಂ ಜಿ.ಬಿ. ತಿಮ್ಮಪ್ಪ ಅವರಿಗೆ ಖಾತೆ ವರ್ಗಾವಣೆಯಾಗಿರುವ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಿಲ್ಲದ ಕಾರಣ. ಪಾಲಾನಾಯ್ಕ ಅವರು ತಮ್ಮ ನಿರ್ಲಕ್ಷ್ಯ ಹಾಗೂ ಕರ್ತವ್ಯಲೋಪ ಮಾಡಿ ಮೂಲ ಖಾತೆದಾರರಿಗೆ ಮೋಸ ಮಾಡಿ ಆಸ್ತಿ ಮಾಲೀಕರಲ್ಲದವರಿಗೆ ಆಸ್ತಿ ಹಕ್ಕು ವರಾಗವಣೆ ಮಾಡಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮಹಾನಗರ ಪಾಲಿಕೆಯಲ್ಲಿ ಅದರಲ್ಲೂ ಕಂದಾಯ ಶಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆರೋಪಗಳು ನಿರಂತರವಾಗಿ ಕೇಳಿ ಬರುತ್ತಲೇ ಇದ್ದವು. ಖಾತೆ ಎಕ್ಸ್ ಟ್ರಾಕ್ಟ್ ನೀಡಲು 5 ರಿಂದ 10 ಸಾವಿರ ರೂ. ನೀಡಬೇಕಾದ ವಾತಾವರಣ ಪಾಲಿಕೆಯಲ್ಲಿ ನಿರ್ಮಾಣವಾಗಿತ್ತು.
ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಈ ಬಗ್ಗೆ ಅನೇಕ ಸಭೆಗಳಲ್ಲಿ ಪತ್ರಿಕಾಗೋಷ್ಠಿಗಳಲ್ಲಿಯೂ ಆರೋಪಿಸಿದ್ದರು. ಆದರೆ ಯಾವೊಬ್ಬ ಅಧಿಕಾರಿಯೂ ಇಂತಹ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿರಲಿಲ್ಲ.
ಇದೀಗ ಆಯುಕ್ತರಾದ ರೇಣುಕಾ ಅವರ ಕ್ರಮಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಮಹಾನಗರ ಪಾಲಿಕೆ ವಾಪ್ತಿಯಲ್ಲಿ ವಿವಿಧ ವಾರ್ಡಗಳು, ಪಾಲಿಕೆ ಖಾಲಿ ನಿವೇಶಗಳು, ಖಾಸಗಿಯವರ ಹಲವು ವರ್ಷಗಳಿಂದ ತೆರಿಗೆ ಕಟ್ಟದೆ ಇರುವ ಖಾಲಿ ನಿವೇಶಗಳು, ಹಾಗು ಖಾತೆ ಬದಲಾವಣೆ ಆಗದೆ ಇರುವ ಖಾಲಿ ನಿವೇಶಗಳನ್ನು, ಮಹಾನಗರ ಪಾಲಿಕೆಯ ಕಂದಾಯ ವಿಭಾಗದ, ಹತ್ತು, ಹದಿನೈದು ವರ್ಷಗಳಿಂದ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ, ಕಾರ್ಯನಿರ್ವಹಿಸುತ್ತಿರುವ (ಬೇರು ಬಿಟ್ಟಿರುವ) ಪಾಲಿಕೆಯ ಅಧಿಕಾರಿಗಳು ಖಾಸಗಿಯಾವರ ಜೊತೆ ಕೈ ಜೋಡಿಸಿ, ಖಾಲಿ ಇರುವ ನಿವೇಶಗಳನ್ನು ಗುರುತಿಸಿ ಎಂ.ಎ.ಆರ್-19, ಮತ್ತು ಕೆ.ಎಂ.ಎಫ್-24  ಪುಸ್ತಕದಲ್ಲಿರುವ ಮಾಲಿಕರ ಹೆಸರುಗಳನ್ನು. ತಿದ್ದುಪಡಿಮಾಡಿ, ತಮಗೆ ಬೇಕಾದವರ ಹೆಸರುಗಳನ್ನು, ಎಂ.ಎ.ಆರ್-19, ಮತ್ತು ಕೆ.ಎಂ.ಎಫ್-24 ಪ್ರಸ್ತಕದಲ್ಲಿ, ಕೂರಿಸಿ, ಕೆಲವು ತಿಂಗಳುಗಳ ನಂತರ ಮಾರಾಟ ಮಾಡುತ್ತಿದ್ದಾರೆ, ಮಹಾನಗರ ಪಾಲಿಕೆಯ ಖಾಲಿ ನಿವೇಶಗಳಿಗೂ ಈ ಮಾದರಿಯನ್ನು ಅನುಸರಿಸಲಾಗಿದೆ ಎಂದು ಇತ್ತೀಚೆಗೆ ನಾಗರಾಜ್ ಸುರ್ವೆ ಎಂಬುವರು ಕೂಡ ಇದೇ ಪಾಲಾನಾಯ್ಕ್ ವಿರುದ್ದ 80 ಸೈಟುಗಳನ್ನ ಅಕ್ರಮವಾಗಿ ದಾಖಲಾತಿಗಳನ್ನ ತಿದ್ದಿ ಪರಭಾರೆ ಮಾಡಿದ್ದಾರೆ ಎಂದು ಆರೋಪಿಸು ಮಹಾನಗರ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದಾರೆ.

ಇಂತಹ ಅನೇಕ ಹೆಗ್ಗಣಗಳು ಪಾಲಿಕೆಯಲ್ಲಿದ್ದು, ಈವುಗಳ ಬಗ್ಗೆಯೂ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!