ಲಂಚಕ್ಕೆ ಬೇಡಿಕೆ ಪ್ರಕರಣ: ದಾವಣಗೆರೆ ಪಿಡಬ್ಲೂಡಿ ಇಲಾಖೆಯ ನಾಲ್ವರು ಅಧಿಕಾರಿಗಳ ಮೇಲೆ ಎಫ್‌ಐಆರ್

ದಾವಣಗೆರೆ: ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ನಾಲ್ವರು ಅಧಿಕಾರಿಗಳ ವಿರುದ್ಧ ಮಂಗಳವಾರ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ದಾವಣಗೆರೆ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ನರೇಂದ್ರಬಾಬು, ಸಹಾಯಕ ಇಂಜಿನಿಯರ್ ವೀರಪ್ಪ, ಕಾರ್ಯಪಾಲಕ ಇಂಜಿನಿಯರ್ ವಿಜಯಕುಮಾರ್, ಹಾಗೂ ಹಿರಿಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಜಗದೀಶ್ ಅವರ ಮೇಲೆ ಎಫ್‌ಐಆರ್ ದಾಖಲಾಗಿದೆ.

ಈ ನಾಲ್ವರು ಅಧಿಕಾರಿಗಳು ಲೋಕೋಪಯೋಗಿ ಕಚೇರಿಯಿಂದ ಮಂಜೂರಾದ ಕಾಮಗಾರಿಯ ಹಣವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಲು ಲಂಚ ಕೊಟ್ಟರೆ ಮಾತ್ರ ಹಣ ಬಿಡುಗಡೆ ಮಾಡುತ್ತೇನೆ. ಇದು ತರಕಾರಿ ವ್ಯಾಪಾರವಲ್ಲ. ನಾನು ಈ ಸ್ಥಳಕ್ಕೆ ಬರಲು 25 ಲಕ್ಷ ಹಣ ಕೊಟ್ಟು ಬಂದಿದ್ದೇನೆ. ನೀವೂ ಸಹ ಒಂದೊಂದು ಕಡತಕ್ಕೆ 20 -20 ಸಾವಿರ ರೂ.ನಂತೆ ಕೊಟ್ಟರೆ ನಿಮ್ಮ ಕಾಮಗಾರಿ ಹಣ ಬಿಡುಗಡೆ ಮಾಡುತ್ತೇನೆ ಎಂದು ಕಾರ್ಯಪಾಲಕ ಅಭಿಯಂತರ ವೀರಪ್ಪ ಇವರು ಸಹ ಸಂಭಾಷಣೆಯಲ್ಲಿ ಇರುವಂತೆ 40 ಸಾವಿರ ರೂ ಪಡೆದಿರುತ್ತೇನೆ ಎಂದು ಹೇಳಿದ್ದಾರೆ.
ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸ್ ಅಪ್ ಗ್ರೂಪ್ ಗೆ ಸೇರಿ👇👇https://chat.whatsapp.com/KKoKihnFdmWGVs3kl4BVty
ನಮ್ಮ ಮೇಲಿನ ಅಧಿಕಾರಿಗಳಿಗೂ ಸಹ ನಾವು ಈ ಹಣವನ್ನು ಕಳುಹಿಸಬೇಕಾಗಿರುತ್ತದೆ. ಹಾಗೂ ಕಡತಗಳಿಗೆ ಸಹಿ ಮಾಡಲು ಹಣವನ್ನು ಕೊಡಿ ಎಂದು ಗುತ್ತಿಗೆದಾರರಿಗೆ ಹೇಳಿರುತ್ತಾರೆ. ಈ ಎಲ್ಲಾ ಮಾಹಿತಿಯನ್ನು ಆಡಿಯೋ ಹಾಗೂ ವೀಡಿಯೋ ಮೂಲಕ ದಾವಣಗೆರೆಯ ಕಛೇರಿಯಲ್ಲಿ ಲಂಚ ಪಡೆಯುವಾಗ ವಿಡಿಯೋ ರೆಕಾರ್ಡ್ ಮಾಡಲಾಗಿದ್ದು, ಪಿ.ಸಿ. ಕಾಯ್ದೆ 1988 ರಿತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.
ದೂರು ದಾಖಲಿಸಿದ್ದ ಶ್ರೀರಾಮ ಸೇನೆಯ ಮಣಿ ಸರ್ಕಾರ್: ಲೋಕೋಪಯೋಗಿ ಇಲಾಖೆಯ ಎಇಇ ಆದಂತ ನರೇಂದ್ರ ಬಾಬು ಹಾಗು ಅಸಿಸ್ಟೆಂಟ್ ಇಂಜಿನಿಯರ್ ಆದಂತಹ ವೀರಪ್ಪರವರು ತಮ್ಮ ಕಚೇರಿಯಲ್ಲೇ ಗುತ್ತಿಗೆದಾರರಿಂದ ಒಂದು ಫೈಲಿಗೆ 40 ಸಾವಿರ ಲಂಚ ಪಡೆಯುತ್ತಿದ್ದು, ಈ ಸ್ಥಾನಕ್ಕೆ ಬರಲು ನಾನು 25 ರಿಂದ 50 ಲಕ್ಷ ಕೊಟ್ಟು ಬಂದಿದ್ದೇನೆ ಎಂದು ಹೇಳುವ ನರೇಂದ್ರ ಬಾಬುರವರ ವಿಡಿಯೋವನ್ನು ರಹಸ್ಯವಾಗಿ ಚಿತ್ರೀಕರಿಸಲಾಗಿತ್ತು. ಅವರ ಮೇಲೆ ಕ್ರಮ ಜರುಗಿಸಬೇಕೆಂದು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.
ಇಂದು ದಾವಣಗೆರೆಯ ಪಿಡಬ್ಲೂಡಿ ಕಛೇರಿಯಲ್ಲಿ ಪಂಚನಾಮೆ ಕೂಡ ಮಾಡಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಈ ನಾಲ್ವರು ಸರ್ಕಾರದಿಂದ ಅಮಾನತು ಆಗುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಮಣಿ ಸರ್ಕಾರ್ ಹೇಳಿದ್ದಾರೆ. ಅಲ್ಲದೆ ದಾವಣಗೆರೆಯಲ್ಲಿ ಇನ್ನೂ ಅನೇಕ ಸರ್ಕಾರಿ ಇಲಾಖೆಗಳಲ್ಲಿ ಇರುವ ಬ್ರಷ್ಟ ಅಧಿಕಾರಿಗಳ ಲಂಚಾವತಾರವನ್ನ ಸೂಕ್ತ ದಾಖಲೆಗಳ ಸಮೇತ ದೂರು ಸಲ್ಲಿಸಿ ಅವರೆಲ್ಲರಿಗೂ ಶಿಕ್ಷೆಗೆ ಗುರಿ ಪಡಿಸುವುದೇ ನಮ್ಮ ಏಕೈಕ ಗುರಿ ಎಂದಿದ್ದಾರೆ.