ಬಿಎಸ್‍ವೈ ಹಾಗೂ ಬೊಮ್ಮಾಯಿ ನೇತೃತ್ವದಲ್ಲಿ 2023 ರ ಚುನಾವಣೆ: ಹಾಲಿ ಮಾಜಿ ಸಿಎಂ ಗಳ ಗುಣಗಾನ ಮಾಡಿದ ಅಮಿತ್ ಶಾ
ದಾವಣಗೆರೆ: ಪ್ರಧಾನಿ ಮೋದಿ ಅವರು ಯಾವಾಗಲೂ ಬಡವರು, ಹಿಂದುಳಿದವರು ಹಾಗೂ ಅಲೆಮಾರಿಗಳ ಬಗ್ಗೆ ಚಿಂತಿಸುತ್ತಾರೆ. ಬಡ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ತರುವ ಜತೆಗೆ ದೀಪಾವಳಿ ಹಬ್ಬದವರೆಗೆ ಅಗತ್ಯವುಳ್ಳ ಪ್ರತಿಯೊಬ್ಬರಿಗೂ ಕೇಂದ್ರದಿಂದ 5 ಕೆ.ಜಿ. ಪಡಿತರ ಧಾನ್ಯ ವಿತರಿಸಲಾಗುತ್ತಿದೆ. ಕರೊನಾ ಜತೆಜತೆಗೆ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಹೋರಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.
ಜಿಎಂಐಟಿಯಲ್ಲಿ ಆಯೋಜಿಸಲಾಗಿದ್ದ ಗಾಂಧಿಭವನ, ಪೆÇಲೀಸ್ ಪಬ್ಲಿಕ್ ಶಾಲೆ ಹಾಗೂ ಜಿಎಂಐಟಿಯ ಕೇಂದ್ರ ಗ್ರಂಥಾಲಯವನ್ನು ವರ್ಚುಯಲ್ ಉದ್ಘಾಟಿಸಿ ಅವರು ಮಾತನಾಡಿದರು.
ಕರೊನಾ ಮಹಾಮಾರಿ ಸಮಗ್ರ ಮನುಕುಲಕ್ಕೆ ಸವಾಲಾಗಿದ್ದು, ಅನ್ಯ ರಾಷ್ಟ್ರಗಳಿಗಿಂತ ಉತ್ತಮವಾಗಿ ಪ್ರಧಾನಿ ನೇತೃತ್ವದಲ್ಲಿ ಕರೊನಾ ನಿಭಾಯಿಸಿದ್ದೇವೆ ಹಾಗೂ ಅದನ್ನು ಸರ್ಮಥವಾಗಿ ಎದುರಿದ್ದೇವೆ. ದೇಶದ ಜನತೆ ಮೋದಿ ಅವರೊಂದಿಗೆ ಕರೊನಾ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಹಲವರು ಈ ಸಂಕಷ್ಟದಲ್ಲಿ ಜೀವ ತಮ್ಮ ತೆತ್ತಿದ್ದು, ಕೆಲವರನ್ನು ಉಳಿಸಲು ಆಗಲಿಲ್ಲ. ಆದರೆ, ಇದರೊಟ್ಟಿಗೆ ಹಲವು ಜನರ ಜೀವವನ್ನು ಉಳಿಸಿದ ಸಂತೃಪ್ತಿ ಇದೆ ಎಂದರು.
ಪ್ರಧಾನಿಗಳ ನೇತೃತ್ವದಲ್ಲಿ ವಿಶ್ವದ ಅತ್ಯಂತ ದೊಡ್ಡ ವ್ಯಾಕ್ಸಿನ್ ಅಭಿಯಾನ ನಡೆಯಿತು. ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿ ಸಾಗುತ್ತಿದ್ದು, ಕರ್ನಾಟಕದಲ್ಲಿ ಒಂದೇ ದಿನದಲ್ಲಿ 1.36 ಲಕ್ಷ ಲಸಿಕೆ ನೀಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದೇವೆ. ಎಲ್ಲರೂ ವ್ಯಾಕ್ಸಿನ್ ಪಡೆಯುವ ಮೂಲಕ ಕರೊನಾ ಹೊಡೆದೋಡಿಸಲು ಸಹಕಾರ ನೀಡಿ ಎಂದು ಕರೆ ನೀಡಿದರು.
ರಾಜ್ಯ ಸರ್ಕಾರವೂ ಕರೊನಾ ಸಂಕಷ್ಟದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದೆ. ಪ್ರತಿ ತಾಲೂಕು ಕೇಂದ್ರಗಳು. ಕರೋನಾ ವಿರುದ್ಧ ಹೋರಾಡುವ ಕ್ಷಮತೆ ಗಳಿಸುತ್ತಿವೆ. ಆಕ್ಸಿಜನ್ ಕೊರತೆಯನ್ನು ಬಹುಪಾಲು ನಿಭಾಯಿಸಿದ್ದೇವೆ. ಆಕ್ಸಿಜನ್ ವಿಚಾರದಲ್ಲಿ ದೇಶ ಸ್ವಾವಲಂಬಿಯಾಗುತ್ತದೆ ಎಂದು ಭರವಸೆ ನೀಡಿದರು.
ಬಿಎಸ್ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅತ್ಯತ್ತಮ ಕಾರ್ಯನಿರ್ವಹಿಸಿದ್ದಾರೆ. ರೈತರ ಪರ ಉತ್ತಮ ಸ್ಪಂದನೆ ಹೊಂದಿದ್ದ ವ್ಯಕ್ತಿಯಗಿದ್ದರು. ಅವರು ಸ್ವಯಂ ನಿರ್ಧಾರದಿಂದ ಸಿಎಂ ಸ್ಥಾನ ತ್ಯಾಗ ಮಾಡಿದರು ಎಂದು ಬಿಎಸ್‍ವೈ ಗುಣಗಾನ ಮಾಡಿದರು.
ಈಗ ಬೊಮ್ಮಾಯಿ ಅವರು ಸಹ ಉತ್ತಮ ಆಡಳಿತ ನೀಡುತ್ತಿದ್ದು, ಪೆÇಲೀಸ್ ಗೌರವ ವಂದನೆ ಪದ್ಧತಿಗೆ ಬೊಮ್ಮಾಯಿ ತಿಲಾಂಜಲಿ ಹೇಳಿದ್ದಾರೆ. ಅವರ ಒಂದೊಂದು ಕಾರ್ಯಕ್ರಮಗಳ ಬಗ್ಗೆ ಉತ್ತಮ ಜನಾಭಿಪ್ರಾಯ ವ್ಯಕ್ತವಾಗುತ್ತಿದೆ. ಬೊಮ್ಮಾಯಿ ಅವರಿಗೆ ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಉತ್ತಮ ನಿರ್ಧಾರ ಎಂಬುದು ಜನರ ಅಭಿಪ್ರಾಯವಾಗಿದೆ ಎಂದರು.
ಬಿಎಸ್‍ವೈ ಹಾಗೂ ಬೊಮ್ಮಾಯಿ ನೇತೃತ್ವದಲ್ಲಿ 2023ರ ಚುನಾವಣೆ ನಡೆಯಲಿದ್ದು, ಸರ್ಕಾರ ರಚನೆಗೆ ಬೇಕಾದಷ್ಟು ಬಹುಮತ ಬಿಜೆಪಿ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಬೈರತಿ ಬಸವರಾಜ್, ಬಿ.ಸಿ. ಪಾಟೀಲ್, ಆನಂದ ಸಿಂಗ್, ಮುರುಗೇಶ ನಿರಾಣಿ, ಮೇಯರ್ ಎಸ್.ಟಿ. ವೀರೇಶ್, ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ್, ಮಾಡಾಳು ವಿರೂಪಾಕ್ಷಪ್ಪ, ಪೆÇ್ರ.ಲಿಂಗಣ್ಣ, ಎಸ್.ವಿ. ರಾಮಚಂದ್ರಪ್ಪ, ಕರುಣಾಕರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಮೋಹನ ಕೊಂಡಜ್ಜಿ ಉಪಸ್ಥಿತರಿದ್ದರು.