ಘೋಷಣೆಗಳ ಬಜೆಟ್ – ಫ್ರೋ ವೆಂಕಟೇಶ್ ಬಾಬು

ದಾವಣಗೆರೆ: ಅಂದಾಜು 2ಲಕ್ಷದ ಆರುವತ್ತು ಸಾವಿರ ಕೋಟಿಯ ಬಜೆಟ್ ಶಿಕ್ಷಣ ಉದ್ಯೋಗ ಸಬಲೀಕರಣ ಎಂಬ ತ್ರಿವಳಿ ಸೂತ್ರದ ಅಡಿಯಲ್ಲಿ ಮಂಡನೆಯಾಗಿದೆ. ರೈತರ ಆದಾಯ ದ್ವಿಗುಣಗೊಳಿಸಲು ರೈತರಿಗಾಗಿ ರೂಪಿಸುವ ರೈತ ಶಕ್ತಿ ಯೋಜನೆ ಪ್ರತಿ ತಾಲ್ಲೂಕಿನಲ್ಲೂ ನೀಟ್ ತರಬೇತಿ ಕೇಂದ್ರಗಳ ಸ್ಥಾಪನೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿ ಯೋಜನೆ ಹಾಗೂ ಏಳು ವಿಶ್ವವಿದ್ಯಾಲಯಗಳ ಸ್ಥಾಪನೆ ಸ್ವಾಗತಾರ್ಹ . ರೈತ ಸಮುದಾಯಕ್ಕೆ ಉಪಯೋಗವಿರುವ ಯಶಸ್ವಿನಿ ಯೋಜನೆಯ ಮರು ಜಾರಿಗೊಳಿಸಲು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ವಿಷಯ . ದಾವಣಗೆರೆ ಜಿಲ್ಲೆಗೆ ವಿಮಾನಿಲ್ದಾಣ ಹಾಲು ಒಕ್ಕೂಟಗಳ ರಚನೆಯ ಘೋಷಣೆ ಹೀಗೆ ಹಲವಾರು ಘೋಷಣೆಗಳಿಂದ ಕೂಡಿರುವ ರಾಜ ಬಜೆಟ್ ಘೋಷಣೆ ಆಗಿರದೆ ಅವು ಜಾರಿಯಾಗಿ ಕಾರ್ಯರೂಪಕ್ಕೆ ಬಂದರೆ ರಾಜ್ಯಕ್ಕೆ ಒಳಿತಾಗುವುದು . ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ಬಗ್ಗೆ ಪ್ರಸ್ತಾಪವಿಲ್ಲ ಹಳೇ ಪಿಂಚಣಿ ವ್ಯವಸ್ಥೆಯ ಬಗ್ಗೆ ಕೂಡ ಯಾವುದೇ ವಿಚಾರ ಪ್ರಸ್ತಾಪಸಿದೆ ಇರುವುದು ನೌಕರ ವರ್ಗಕ್ಕೆ ಕಹಿ ವಿಷಯವಾಗಿದೆ. ಇತರೆ ಯಾವುದೇ ತೆರಿಗೆ ಮತ್ತು ಸುಂಕ ವನ್ನು ಏರಿಸದೆ ಇರುವುದು
ಸಂಗತಿ.
ವೆಂಕಟೇಶ್ ಬಾಬು ಎಸ್ ಕಾರ್ಯದರ್ಶಿಗಳು
ವಾಣಿಜ್ಯ ಶಾಸ್ತ್ರ ಅಧ್ಯಾಪಕರ ವೇದಿಕೆ ದಾವಣಗೆರೆ